ವಿಶೇಷ ಶಾಲೆಗಳಿಗೂ ಸಮಾನ ಅನುದಾನ, ವೇತನ ನೀಡಲು ಆಗ್ರಹ
ಉಡುಪಿ, ಫೆ.22: ರಾಜ್ಯದ ವಿಶೇಷ ಮಕ್ಕಳ ಶಾಲೆಗಳ ಬಗ್ಗೆ ರಾಜ್ಯ ಸರಕಾರ ಇಬ್ಬಗೆ ಅನುದಾನ ನೀತಿಯನ್ನು ಕೈಬಿಟ್ಟು, ಇಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕ ಶಿಕ್ಷಕೇತರಿಗೆ ಸಾಮಾನ್ಯ ಮಕ್ಕಳ ಶಾಲೆಗಳ ಶಿಕ್ಷಕರಂತೆ ವೇತನ ಮತ್ತು ಸೇವಾ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘವು, ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ಅಂಗವಿಕಲರ ಹಕ್ಕುಗಳ ಅಧಿನಿಯಮದ ಆಯುಕ್ತ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಬುದ್ಧಿಮಾಂದ್ಯ, ಆಟಿಸಂ, ಸೆರೆಬ್ರೆಲ್ ಫಾಲ್ಸಿ, ಮೆದುಳಿನ ಪಾರ್ಶ್ವ ಬಹುವಿಧ ನ್ಯೂನತೆ, ಅಂಧತ್ವ, ಶ್ರವಣ ದೋಷ, ದೈಹಿಕ ಅಂಗವಿಕಲತೆ ಹಾಗೂ ಇನ್ನಿತರ ನ್ಯೂನತೆಗಳಿಂದ ಬಳಲುತ್ತಿರುವವರಿಗಾಗಿ 500ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ತಮ್ಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಾಲೆಗಳನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ.
ರಾಜ್ಯದಲ್ಲಿ ಬುದ್ಧಿಮಾಂದ್ಯ, ಆಟಿಸಂ, ಸೆರೆಬ್ರೆಲ್ ಫಾಲ್ಸಿ, ಮೆದುಳಿನ ಪಾರ್ಶ್ವ ಬಹುವಿನ್ಯೂನತೆ,ಅಂತ್ವ, ಶ್ರವಣ ದೋಷ, ದೈಹಿಕ ಅಂಗವಿಕಲತೆ ಹಾಗೂ ಇನ್ನಿತರ ನ್ಯೂನತೆಗಳಿಂದ ಬಳಲುತ್ತಿರುವವರಿಗಾಗಿ 500ಕ್ಕೂ ಹೆಚ್ಚು ಸ್ವಯಂ ಸೇವಾ ಸಂಸ್ಥೆಗಳು ತಮ್ಮ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷ ಶಾಲೆಗಳನ್ನು ಸ್ಥಾಪಿಸಿಕೊಂಡು ಕಾರ್ಯನಿರ್ವಹಿಸುತ್ತಿವೆ. ಆದರೆ ಈ ಶಾಲೆಗಳಲ್ಲಿ ಕೆಲವೇ ಶಾಲೆಗಳು ಮಾತ್ರ 1982ರ ಅನುದಾನ ನೀತಿ ಮತ್ತು ಶಿಶು ಕೇಂದ್ರೀಕೃತ ಯೋಜನೆಯಡಿ ಅನುದಾನ ಪಡೆಯುತ್ತಿವೆ. ಉಳಿದ ಶಾಲೆಗಳಿಗೆ ವಿವಿಧ ಕಾರಣಗಳನ್ನು ಹೇಳಿ ಅನುದಾನ ನೀಡಲಾಗುತ್ತಿಲ್ಲ. ಆದ್ದರಿಂದ ಅವು ಆರ್ಥಿಕ ಸಂಕಷ್ಟದಲ್ಲಿವೆ. ಅಲ್ಲಿನ ಮಕ್ಕಳು ಅನೇಕ ಸೌಲಭ್ಯ ಮತ್ತು ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಆದ್ದರಿಂದ ಸರಕಾರ ಈ ಇಬ್ಬಗೆಯ ನೀತಿಯನ್ನು ಹೋಗಲಾಡಿಸಿ, ಎಲ್ಲಾ ವಿಶೇಷ ಶಾಲೆಗಳಿಗೆ ಅನುದಾನ ನೀಡಬೇಕು ಮತ್ತು ವಿಶೇಷ ಶಾಲೆಗಳ ಶಿಕ್ಷಕ ಸಿಬ್ಬಂದಿಗಳಿಗೂ ಇತರ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗಳಂತೆ ಸಮಾನ ವೇತನ, ಸೇವಾಭದ್ರತೆಯನ್ನು ನೀಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಆಯುಕ್ತರಿಗೆ ವಿಶೇಷ ಶಿಕ್ಷಕರು ಶಿಕ್ಷಕೇತರರ ಸಂಘದ ರಾಜ್ಯಾಧ್ಯಕ್ಷೆ ಮತ್ತು ಉಡುಪಿ ಜಿಲ್ಲಾಧ್ಯಕ್ಷೆ ಡಾ.ಕಾಂತಿಹರೀಶ್, ಪ್ರಧಾನ ಕಾರ್ಯದರ್ಶಿ ಜಯವಿಜಯ ಮನವಿಯನ್ನು ಸಲ್ಲಿಸಿದರು. ಆಯುಕ್ತರು ಈ ಮನವಿಯ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.