ಕೊಡಂಕೂರು ಸಂಸ್ಕೃತ ವಿದ್ಯಾಪೀಠದ ಘಟಿಕೋತ್ಸವ

Update: 2019-02-22 15:39 GMT

ಉಡುಪಿ, ಫೆ.22: ಕೊಡಂಕೂರಿನ ವಿಶ್ವಬ್ರಾಹ್ಮಣ ಸಂಸ್ಕೃತ ವಿದ್ಯಾಪೀಠದ ಘಟಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆಯು ಇತ್ತೀಚೆಗೆ ವಿದ್ಯಾಪೀಠದ ಆವರಣದಲ್ಲಿ ಜರಗಿತು.

ಘಟಿಕೋತ್ಸವವನ್ನು ಉದ್ಘಾಟಿಸಿದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿ ವಿದ್ಯಾಪೀಠದಲ್ಲಿ 5 ವರ್ಷಗಳ ಶಿಕ್ಷಣ-ತರಬೇತಿ ಮುಗಿಸಿ, ಸರಕಾರ ನಡೆಸಿದ ಸಂಸ್ಕೃತ ಕಾವ್ಯ ಹಾಗೂ ಸಾಹಿತ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 66 ವಿದ್ಯಾರ್ಥಿ ಗಳಿಗೆ ಪ್ರಶಸ್ತಿ ಪತ್ರ ನೀಡಿ, ಪದವಿ ಪ್ರದಾನ ಮಾಡಿದರು.

ಮುಖ್ಯ ಅತಿಥಿಗಳಾಗಿ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಉಡುಪಿಯ ತಿರುಮಲ ಜ್ಯುವೆಲ್ಲರ್ಸ್‌ನ ಗಂಗಾಧರ ಆಚಾರ್ಯ, ನಿಟ್ಟೆ ಆಡಳಿತ ಮಹಾವಿದ್ಯಾಲಯದ ಡೀನ್ ಡಾ. ಅನಂತ ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ವಿದ್ಯಾಪೀಠದ ಅಧ್ಯಕ್ಷ ಅಲೆವೂರು ಯೋಗೀಶ ಆಚಾರ್ಯ ವಹಿಸಿದ್ದರು. ಶಶಿಕಲಾ ಪಿ. ಆಚಾರ್ಯ ಹಾಗೂ ಹೇಮಲತಾ ಅವರನ್ನು ಸನ್ಮಾನಿಸಲಾಯಿತು. ವಿದ್ಯಾಪೀಠದ ರಿಜಿಸ್ಟ್ರಾರ್ ಬಿ.ಎ.ಆಚಾರ್ಯ ಮಣಿಪಾಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯರಾಮ ಆಚಾರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಶ್ರೀಧರ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News