ಫೆ.24ರಂದು ‘ಅಮ್ಮನಿಂದ ಅಮ್ಮನೆಡೆಗೆ’ ಪಾದಯಾತ್ರೆ

Update: 2019-02-22 15:40 GMT

ಉಡುಪಿ, ಫೆ.22: ಲೋಕ ಕಲ್ಯಾಣಾರ್ಥವಾಗಿ ದ್ವಿತೀಯ ವರ್ಷದ ಅಲೆವೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಿಂದ ಕುಂಜಾರುಗಿರಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದವರೆಗೆ ‘ಅಮ್ಮನಿಂದ ಅಮ್ಮನೆಡೆಗೆ’ ಪಾದ ಯಾತ್ರೆಯನ್ನು ಫೆ.24ರಂದು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 6:30ಕ್ಕೆ ಅಲೆವೂರು ದೇವಸ್ಥಾನದಲ್ಲಿ ಸಮಷ್ಟಿ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಪಾದಯಾತ್ರೆಯು ಬೆಳಗ್ಗೆ 9 ಗಂಟೆಗೆ ಕುಂಜಾರುಗಿರಿಯಲ್ಲಿ ಪಾದಯಾತ್ರೆ ಸಮಾಪನಗೊಳ್ಳಲಿದೆ.

ಈ ಸಂದರ್ಭದಲ್ಲಿ ಅದಮಾರು ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News