ಉದ್ಯಮದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Update: 2019-02-22 15:46 GMT

ಮಣಿಪಾಲ, ಫೆ.22: ಮಣಿಪಾಲ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಇನ್ ಫೈನಾನ್ಶಿಯಲ್ ಇನ್ಕ್ಲೂಷನ್ ವತಿಯಿಂದ ವಿತ್ತಿಯ ಸೇರ್ಪಡೆ ಮೂಲಕ ಆರ್ಥಿಕ ಪರಿವರ್ತನೆಯ ಸೃಷ್ಠಿ ಹಾಗೂ ಹೊಸ ಅವಿಷ್ಕಾರ ಮತ್ತು ಸ್ಪೂರ್ತಿ ಎಂಬ ವಿಷಯದ ಕುರಿತು ಮಣಿಪಾಲ ಎಂಐಟಿಯ ಸರ್ ಎಂ.ವಿ.ಹಾಲ್‌ನಲ್ಲಿ ಆಯೋಜಿಸಲಾದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಶುಕ್ರವಾರ ಉದ್ಘಾಟನೆಗೊಂಡಿತು.

ಸಮ್ಮೇಳನವನ್ನು ಉದ್ಘಾಟಿಸಿದ ಅಶೋಕ ಸಂಸ್ಥೆಯ ದಕ್ಷಿಣ-ಏಷಿಯಾ ನಿರ್ದೇಶಕ ಸುನೀಶ್ ಜೌಹರಿ ಮಾತನಾಡಿ, ಯಶಸ್ವಿ ಸಾಮಾಜಿಕ ಉದ್ಯಮಿ ಯಾಗಲು ಪ್ರಮುಖ ಅಂಶಗಳಾದ ಪರಸ್ಪರ ಅವಲಂಬನೆ ಮತ್ತು ಅನುಭೂತಿ ಅತಿ ಅಗತ್ಯವಾಗಿದೆ. ಕೈಗೆಟುಕುವ ದರದ ವಸತಿ ಮತ್ತು ಸಾಮಾಜಿಕ ವ್ಯವಹಾರ ಮಾದರಿಗಳು ಇಂದಿನ ಬಹಳ ದೊಡ್ಡ ಸವಾಲು ಆಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಹಿಸಿದ್ದರು. ಸಮ್ಮೇಳನದ ಸಂಯೋಜಕಿ ಡಾ.ಸವಿತಾ ಶೆಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ರಂಜಿತ್ ವಿ.ಕೆ. ವಂದಿಸಿದರು. ಪ್ರೊ.ಚೇತನಾ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News