ಹಣ ಅಕ್ರಮ ವರ್ಗಾವಣೆ ಪ್ರಕರಣ: ಐದನೇ ಬಾರಿ ವಿಚಾರಣೆಗೆ ಹಾಜರಾದ ವಾದ್ರಾ

Update: 2019-02-22 16:16 GMT

ಹೊಸದಿಲ್ಲಿ, ಫೆ.22: ಲಂಡನ್‌ನಲ್ಲಿ ಅಕ್ರಮ ಆಸ್ತಿ ಖರೀದಿಸಲು ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಉದ್ಯಮಿ ರಾಬರ್ಟ್ ವಾದ್ರಾ ಐದನೇ ಬಾರಿ ಜಾರಿ ನಿರ್ದೇಶನಾಲಯ(ಇಡಿ)ದ ಎದುರು ವಿಚಾರಣೆಗೆ ಹಾಜರಾದರು.

ಈ ಪ್ರಕರಣದಲ್ಲಿ ಇತರ ಆರೋಪಿಗಳು ವಿಚಾರಣೆ ಸಂದರ್ಭ ನೀಡಿದ ಹೇಳಿಕೆ ಹಾಗೂ ವಾದ್ರಾ ಹೇಳಿಕೆಯನ್ನು ಮತ್ತು ದಾಖಲೆ ಪತ್ರವನ್ನು ಇಡಿ ಅಧಿಕಾರಿಗಳು ಪರಿಶೀಲಿಸಿದರು ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ದಿನದಲ್ಲಿ ಸುಮಾರು 26 ಗಂಟೆಗೂ ಅಧಿಕ ಕಾಲ ವಾದ್ರಾರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದಕ್ಕೂ ಮೊದಲು, ಬಿಕಾನೇರ್‌ನಲ್ಲಿ ಮತ್ತೊಂದು ಅಕ್ರಮ ಜಮೀನು ಪ್ರಕರಣದಲ್ಲೂ ವಾದ್ರಾ ಹಾಗೂ ಅವರ ತಾಯಿಯನ್ನು ಇಡಿ ಅಧಿಕಾರಿಗಳು ಜೈಪುರದಲ್ಲಿ ಎರಡು ಬಾರಿ ವಿಚಾರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News