ದೂಮಳಿಕೆ: ಮಾ.1ರಂದು ನವೀಕೃತ ಮಸೀದಿ, ಮದರಸ ಉದ್ಘಾಟನಾ ಸಮಾರಂಭ

Update: 2019-02-22 16:45 GMT

ಬಂಟ್ವಾಳ, ಫೆ. 22: ದೂಮಳಿಕೆಯ ಬಿಸ್ಮಿಲ್ಲಾ ಜುಮಾ ಮಸ್ಜಿದ್ ಇದರ ವತಿಯಿಂದ ನವೀಕೃತ ಮಸೀದಿ ಮತ್ತು ಮದರಸ ಕಟ್ಟಡ ಉದ್ಘಾಟನಾ ಸಮಾರಂಭ ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ.

ಫೆ. 28ರಂದು ಅನುಸ್ಮರಣಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಬಿಸ್ಮಿಲ್ಲಾ ಜುಮಾ ಮಸ್ಜಿದ್ ಅಧ್ಯಕ್ಷ ಎಚ್. ಇಬ್ರಾಹಿಂ, ಯು.ಕೆ. ಇಸ್ಮಾಯಿಲ್ ಫೈಝಿ, ಅನೀಸ್ ಕೌಸರಿ ವೀರಮಂಗಲ, ಇಸ್ಹಾಕ್ ಫೈಝಿ ಕುಕ್ಕಿಲ, ಬಿಸ್ಮಿಲ್ಲಾ ಜುಮಾ ಮಸ್ಜಿದ್ ಪ್ರ.ಕಾರ್ಯದರ್ಶಿ ಶರೀಫ್ ದೂಮಳಿಕೆ, ಬಿಸ್ಮಿಲ್ಲಾ ಜುಮಾ ಮಸ್ಜಿದ್ ಖತೀಬ್ ಆದಂ ಮುಸ್ಲಿಯಾರ್, ಎಚ್.ಇ.ಮುಹಮ್ಮದ್ ಹನೀಫ್, ಮೊದಲಾದವರು ಉಪಸ್ಥಿತರಿರುವರು.

ಮಾ.1ರಂದು ನವೀಕೃತ ಮಸೀದಿ ಮತ್ತು ಮದರಸ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಲಿದ್ದು, ದ.ಕ. ಜಿಲ್ಲಾ ಖಾಝಿ ಶೈಖುನಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಉದ್ಘಾಟಿಸಲಿರುವರು. ಅಸಯ್ಯದ್ ಎಝ್‌ಮಲೆ ಎನ್.ಪಿ.ಎಮ್. ಫಝಲ್ ಕೋಯಮ್ಮ ತಂಙಲ್ ಅಲ್ ಬುಖಾರಿಯವರು ದುಆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಝೈನುಲ್ ಆಬಿದೀನ್ ಜಿಫ್ರಿ ತಂಙಲ್ ಪೋಸೋಟ್, ಸಯ್ಯದ್ ಅಮೀರ್ ತಂಙಲ್ ಕಿನ್ಯಾ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ ಕಣಚೂರು ಮೋನು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯ ಎಂ.ಬಿ. ನಝೀರ್ ಮಠ, ಎಸ್.ಡಿ.ಪಿ.ಐ. ದ.ಕ. ಜಿಲ್ಲಾ ಸಮಿತಿ ಸದಸ್ಯ ಹನೀಫ್ ಖಾನ್ ಕೊಡಾಜೆ, ಜಿಪಂ ಸದಸ್ಯ ಪದ್ಮಶೇಖರ್ ಜೈನ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಅಬ್ದುಲ್ ರಝಾಕ್ ಪೆರಿಂಜೆ, ಕಾವಳಕಟ್ಟೆ ಜಾಮಿಆ ಮಸ್ಜಿದ್ ಅಧ್ಯಕ್ಷ ಶೇಖ್ ರಹ್ಮತುಲ್ಲಾ ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News