ಆರಂಭಗೊಂಡ ಐಸಿಎಸ್‍ಇ ಪರೀಕ್ಷೆ: ಎಲ್ಲ ವಿದ್ಯಾರ್ಥಿಗಳು ಹಾಜರು

Update: 2019-02-22 16:53 GMT

ಭಟ್ಕಳ, ಫೆ. 22: ಪ್ರಥಮ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿರುವ ನ್ಯೂ ಶಮ್ಸ್ ಸ್ಕೂಲ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಆರಂಭಗೊಂಡಿರುವ ಐಸಿಎಸ್‍ಇ ಪಠ್ಯ ಕ್ರಮದ ಹತ್ತನೇ ತರಗತಿ ಪರೀಕ್ಷೆಗೆ ತಾಲೂಕಿನ ಎರಡು ಶಾಲೆಯ 49 ವಿದ್ಯಾರ್ಥಿಗಳು ಹಾಜರಾಗಿದ್ದರು.

ಇಂದು ಜರಗಿದ ಇಂಗ್ಲಿಷ್1 ವಿಷಯದಲ್ಲಿ ಎಲ್ಲ 49 ವಿದ್ಯಾರ್ಥಿಗಳು ಹಾಜರಿದ್ದು ಪರೀಕ್ಷೆಗಳು ಸುಸೂತ್ರವಾಗಿ ನಡೆಯಿತು ಎಂದು ಪರೀಕ್ಷಾ ಮೇಲ್ವಿಚಾರಕ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದರು.

ಫೆ. 22 ಇಂಗ್ಲಿಷ್ (ಪ್ರಥಮ) ಫೆ. 25 ಇಂಗ್ಲಿಷ್ (ದ್ವಿತೀಯಾ), ಫೆ. 26 ಹಿಂದಿ, ಮಾರ್ಚ್ 1 ಹಿಸ್ಟರಿ ಮತ್ತು ಸಿವಿಕ್ಸ್, ಮಾರ್ಚ್ 5 ಭೌತಶಾಸ್ತ್ರ, ಮಾರ್ಚ್ 8 ಗಣಿತ, ಮಾರ್ಚ್ 11 ಭೂಗೋಳ, ಮಾರ್ಚ್ 13 ಉರ್ದು, ಮಾರ್ಚ್ 18 ದೈಹಿಕ ಶಿಕ್ಷಣ, ಮಾರ್ಚ್ 22 ರಸಾಯನಶಾಸ್ತ್ರ, ಮಾರ್ಚ್ 25 ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News