ಡಾ. ವಿಜಯಾ ಬೆಂಗಳೂರುಗೆ ಶಿವರಾಮ ಕಾರಂತ ಪ್ರಶಸ್ತಿ

Update: 2019-02-22 17:12 GMT
ಡಾ. ವಿಜಯಾ ಬೆಂಗಳೂರು, ಡಾ. ಸರಜೂ ಕಾಟ್ಕರ್, ಮಸುಮ, ನಟರಾಜ್

ಮೂಡುಬಿದಿರೆ, ಫೆ. 22:  ಇಲ್ಲಿನ ಶಿವರಾಮ ಕಾರಂತ ಪ್ರತಿಷ್ಠಾನದ ಶಿವರಾಮ ಕಾರಂತ ಪ್ರಶಸ್ತಿಗೆ ಸಾಹಿತಿ ಡಾ. ವಿಜಯಾ ಬೆಂಗಳೂರು ಅವರು ಶಿವರಾಮ ಕಾರಂತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಾ.ಸರಜೂ ಕಾಟ್ಕರ್ ಅವರ `ಸಾವಿತ್ರಿಭಾಯಿ ಪುಲೆ', ಮಸುಮ ಅವರ `ಬೂಬನ ಕಥೆಗಳು' ಹಾಗೂ ಆಗುಂಬೆ ಎಸ್.ನಟರಾಜ್ ಅವರ `ಗಾಂಧೀಜಿ ನಾಡಿನಲ್ಲಿ ನೌಕಾಲಿಗೊಂದು ಮರುಯಾತ್ರೆ' ಕೃತಿಗಳು ಶಿವರಾಮ ಕಾರಂತ ಪುರಾಸ್ಕರಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಶುಕ್ರವಾರ ಸಾಯಂಕಾಲ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪುರಸ್ಕಾರವು ತಲಾ 10 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಎಂಸಿಎಸ್ ಬ್ಯಾಂಕ್  ಸಹಯೋಗದಲ್ಲಿ ಬ್ಯಾಂಕ್‍ನ ಕಲ್ಪವೃಕ್ಷ ಸಭಾಭವನ ದಲ್ಲಿ ಮಾ. 1ರಂದು ಮಧ್ಯಾಹ್ನ 2.30ಕ್ಕೆ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಭೋಜೆಗೌಡ ಶುಭಾಂಶನೆಗೈಯಲಿದ್ದಾರೆ.

ಅಂದು ಬೆಳಗ್ಗೆ 9.30ಕ್ಕೆ ಗಾಂಧಿಯಾನ-ಒಂದು ಪಯಣ ವಿಚಾರ ಸಂಕಿರಣವನ್ನು ಡಾ.ಅರವಂದ ಮಾಲಗತ್ತಿ ಉದ್ಘಾಟಿಸಲಿರುವರು. ನನ್ನ ಭಾವಲೋಕದ ಗಾಂಧಿ ವಿಚಾರದ ಕುರಿತು ಡಾ.ಸರಜೂ ಕಾಟ್ಕರ್ ಮಾತನಾಡಲಿರುವರು. ವೈ.ಎಸ್.ವಿ ದತ್ತ `ಕವಿಕಂಡ ಗಾಂಧಿ’ ಬಗ್ಗೆ ಮಾತನಾಡಲಿರುವರು. ಹರಿಕೃಷ್ಣ ಪುನರೂರು ಶುಭಾಂಶನೆಗೈಯಲಿರುವರು ಎಂದು ಅಮರನಾಥ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ್ ಮಾವಿನಕುಳಿ, ಕೋಶಾಧಿಕಾರಿ ಕೃಷ್ಣರಾಜ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News