×
Ad

ಫೆ. 23: ವಿಶೇಷ ಅಂಚೆ ಲಕೋಟೆ ಬಿಡುಗಡೆ

Update: 2019-02-22 23:21 IST

ಮಂಗಳೂರು, ಫೆ,22: ಕರ್ನಾಟಕ ಅಂಚೆ ವೃತ್ತವು ಮಹಾತ್ಮ ಗಾಂಧೀಜಿಯ 150ನೇ ಜನ್ಮದಿನೋತ್ಸವದ ಆಚರಣೆಯ ಸ್ಮರಣಾರ್ಥ ಗಾಂಧೀಜಿಯವರಿಂದ ಪ್ರತಿಪಾದಿಸಲ್ಪಟ್ಟ ವಿವಿಧ ಧ್ಯೇಯಗಳನ್ನು ಒಳಗೊಂಡ 12 ವಿಶೇಷ ಅಂಚೆ ಲಕೋಟೆಗಳನ್ನು ಹೊರತರಲು ನಿರ್ಧರಿಸಿದೆ. ಅದರಂತೆ ಈಗಾಗಲೇ 5 ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆಗೊಳಿಸಲಾಗಿದೆ.

ಪ್ರಸ್ತುತ 6ನೆ ವಿಶೇಷ ಅಂಚೆ ಲಕೋಟೆಯ ಬಿಡುಗಡೆಯು ಮಹಾತ್ಮ ಗಾಂಧೀಜಿಯವರ ಮಂಗಳೂರು ಭೇಟಿಯ ಸ್ಮರಣಾರ್ಥ ‘ಮದ್ಯಪಾನ ನಿಷೇಧ’ ಎಂಬ ವಿಷಯದ ಬಗ್ಗೆ ಫೆ.23ರಂದು ಅಪರಾಹ್ನ 2 ಗಂಟೆಗೆ ನಗರದ ಹೊಗೆ ಬಜಾರ್‌ನ ಜ್ಞಾನೋದಯ ಸಮಾಜ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News