ಫೆ. 23: ಫಾದರ್ ಮುಲ್ಲರ್ ಪದವಿ ಪ್ರದಾನ ಕಾರ್ಯಕ್ರಮ

Update: 2019-02-22 17:55 GMT

ಮಂಗಳೂರು, ಫೆ.22: ಫಾದರ್ ಮುಲ್ಲರ್ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳ ಕಾಲೇಜು ಹಾಗೂ ಫಾದರ್ ಮುಲ್ಲರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭವು ಫೆ. 23ರಂದು ಅಪರಾಹ್ನ 2:30ಕ್ಕೆ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ.

ಎಂಬಿಬಿಎಸ್, ಸ್ನಾತಕೋತ್ತರ ಪದವಿ/ಡಿಪ್ಲೊಮಾ, ಎಂಸಿಎಚ್, ಪಿಎಚ್‌ಡಿ, ಫಿಸಿಯೊಥೆರಪಿ, ಆಸ್ಪತ್ರೆ ಆಡಳಿತ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ರೇಡಿಯೋಥೆರಪಿ ಹಾಗೂ ವಾಕ್ ಮತ್ತು ಶ್ರವಣ ಹೀಗೆ ವಿವಿಧ ಕೋರ್ಸ್‌ಗಳ 378 ಮಂದಿ ಪದವೀಧರರು ಪ್ರಮಾಣಪತ್ರಗಳನ್ನು ಸ್ವೀಕರಿಸಲಿದ್ದಾರೆ.

ಮಲೇಷ್ಯಾದ ಪೆರ್ಡಾನಾ ವಿವಿಯ ಕುಲಪತಿ ಪ್ರೊ. ಡಾ. ಝಬೀದಿ ಎಎಂ ಹುಸೇನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತದ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷ ಡಾ.ಪೀಟರ್ ಪೌಲ್ ಸಲ್ಡಾನಾ ವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News