ಉಡುಪಿ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಸ್ತಿತ್ವಕ್ಕೆ
Update: 2019-02-23 19:00 IST
ಉಡುಪಿ, ಫೆ.23: ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಸಂಸ್ಥೆ ನವದೆಹಲಿ ಇದರ ಸಂಯೋಜಿತ ಸಂಸ್ಥೆಯಾದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಉುಪಿ ಜಿಲ್ಲಾ ಘಟಕವನ್ನು ರಚಿಸಲಾಗಿದೆ.
ಉಡುಪಿ ಜಿಲ್ಲಾ ಪತ್ರಕರ್ತರ ಯೂನಿಯನ್ ಅಧ್ಯಕ್ಷರಾಗಿ ಕೆ.ಶಶಿಧರ್ ಹೆಮ್ಮಣ್ಣ, ಕಾರ್ಯದರ್ಶಿಯಾಗಿ ಶಿಜಿತ್ ಕುಮಾರ್, ಸಂಚಾಲಕರಾಗಿ ಆಸ್ಟ್ರೋ ಮೋಹನ್, ಜನಾರ್ದನ ಕೊಡವೂರು ಹಾಗೂ ಗೌರವಾಧ್ಯಕ್ಷರಾಗಿ ಯು.ಎಸ್ ಶೆಣೈ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿಗಳಾಗಿ ಸುರೇಶ್ ಏರ್ಮಾಳ್, ಸತೀಶ್ ಕುಮಾರ್, ಉಪಾಧ್ಯಕ್ಷರುಗಳಾಗಿ ಡಾ.ಸುಧಾಕರ ನಂಬಿಯಾರ್, ಡಾ.ಆಕಾಶ್ ರಾಜ್, ಖಜಾಂಚಿ ಶ್ರೇಯಸ್ ಕೆ., ರಾಜ್ಯ ಸಂಘದ ಪ್ರತಿನಿಧಿಯಾಗಿ ರೂಪೇಶ್ ಕಲ್ಮಾಡಿ, ಕಾನೂನು ಸಲಹೆಗಾರರಾಗಿ ರವಿಕಿರಣ್ ಮುರ್ಡೇಶ್ವರ, ಶಾಂತರಾಮ್ ಶೆಟ್ಟಿ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸುಕುಮಾರ್ ಮುನಿಯಾಲ್, ಯಶೋದ, ಶ್ರೀದತ್ತ ಶೆಟ್ಟಿ, ಸುರೇಶ್ ಶೆಟ್ಟಿ, ಬಿಂಬ ವಸಂತ ಕುಮಾರ್ ಅವರನ್ನು ಆರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.