ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು: 378 ಮಂದಿಗೆ ಪದವಿ ಪ್ರದಾನ

Update: 2019-02-23 13:50 GMT

ಮಂಗಳೂರು, ಫೆ.23: ಫಾದರ್ ಮುಲ್ಲರ್ ವೈದ್ಯಕೀಯ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳ ಕಾಲೇಜು ಹಾಗೂ ಫಾದರ್ ಮುಲ್ಲರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಇಂದು ನಡೆದಿದ್ದು, 378 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.

ಮಲೇಶ್ಯದ ಪೆರಡಾನಾ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಝಬೀದಿ ಎ.ಎಂ. ಹುಸೈನ್ ಅವರು ಪದವಿ ಪ್ರದಾನ ಮಾಡಿ, ದವೀಧರರಿಗೆ ಶುಭ ಹಾರೈಸಿದರು.

ಮಂಗಳೂರು ಬಿಷಪ್ ಹಾಗೂ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ಅಧ್ಯಕ್ಷ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನಾ ಅಧ್ಯಕ್ಷತೆ ವಹಿಸಿದ್ದರು.
ಫಾದರ್ ಮುಲ್ಲರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಭಾಗದಲ್ಲಿ 32, ಎಂಬಿಬಿಎಸ್ 153 ಸೇರಿದಂತೆ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಸಿಎಚ್, ಪಿಎಚ್‌ಡಿ, ಫಿಸಿಯೋಥೆರಪಿ, ಆಸ್ಪತ್ರೆ ಆಡಳಿತ, ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ, ರೇಡಿಯೋಥೆರಪಿ ಸೇರಿದಂತೆ ಒಟ್ಟು 378 ಮಂದಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

ಫಾದರ್ ಮುಲ್ಲರ್ ಚಾರಿಟೆಬಲ್ ಇನ್‌ಸ್ಟಿಟ್ಯೂಶನ್‌ನ ನಿರ್ದೇಶಕ ರೆ.ಫಾ. ರಿಚರ್ಡ್ ಎ. ಕುವೆಲ್ಲೋ ಸ್ವಾಗತಿಸಿದರು. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಡಾ. ಜೆ.ಪಿ. ಆಳ್ವ ಹಾಗೂ ಫಾದರ್ ಮುಲ್ಲರ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಅಖಿಲೇಶ್ ಪಿ.ಎಂ. ವಾರ್ಷಿಕ ವರದಿ ಮಂಡಿಸಿದರು.

ಪದವಿ ಪ್ರದಾನ ಸಂದರ್ಭ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪದವೀಧರರಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News