‘ನಮ್ಮ ನಡಿಗೆ ಮಾದಕ ಮುಕ್ತ ಸಮಾಜದೆಡೆಗೆ’ ಕುರಿತು ಜಾಥ

Update: 2019-02-23 15:24 GMT

ಗಂಗೊಳ್ಳಿ, ಫೆ.23: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಗಂಗೊಳ್ಳಿ ಪೊಲೀಸ್ ಠಾಣೆ ಹಾಗೂ ಕೋಸ್ಟಲ್ ಮಿರರ್ ಮೀಡಿಯಾ ಇವುಗಳ ಸಹಯೋಗದೊಂದಿಗೆ ‘ನಮ್ಮ ನಡಿಗೆ ಮಾದಕ ಮುಕ್ತ ಸಮಾಜದೆಡೆಗೆ’ ಎಂಬ ಶೀರ್ಷಿಕೆಯಡಿಯಲ್ಲಿ ಕಾಲ್ನಡಿಗೆ ಜಾಥ ಮತ್ತು ಸಾರ್ವ ಜನಿಕ ಸಭೆಯನ್ನು ಗಂಗೊಳ್ಳಿಯಲ್ಲಿ ಶನಿವಾರ ಆಯೋಜಿಸಲಾಗಿತ್ತು.

ಗಂಗೊಳ್ಳಿ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಂಸ್ಥೆಯ ಅಕ್ತರ್ ಅಹಮದ್ ಖಾನ್ ಗಿಡಕ್ಕೆ ನೀರನ್ನು ಹಾಕುವ ಮೂಲಕ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿದರು. ನಂತರ ಜಾಥವು ನಗರದ ರಸ್ತೆಯಲ್ಲಿ ಸಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಮಾಪ್ತಿಗೊಂಡಿತು. ಜಾಥದಲ್ಲಿ ಗಂಗೊಳ್ಳಿಯ ವಿವಿಧ ಶಾಲೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.

ಕಾಲೇಜಿನಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮನೋ ರೋಗ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳು ರೀತಿಯ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಉಜ್ವಲ ಜೀವನವನ್ನು ರೂಪಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಯರಾಮ್, ಸಹಾಯಕ ಪೊಲೀಸ್ ನಿರೀಕ್ಷಕ ರಾಜರಾಮ, ಬಿಆರ್‌ಪಿ ಸುಷ್ಮಾ, ಜಮಾಅತೆ ಇಸ್ಲಾಮಿ ಹಿಂದ್ ಗಂಗೊಳ್ಳಿ ಘಟಕದ ಮಾಜಿ ಅಧ್ಯಕ್ಷ ಮನ್ಸೂರ್, ಎಸ್‌ಐಓ ಮಾಜಿ ರಾಷ್ಟ್ರೀಯ ಕಾರ್ಯದರ್ಶಿ ರಿಯಾನ್ ಉಡುಪಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಡಾ.ಫಹೀಮ್ ಹೂಡೆ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಕವಿತ ಎಂ.ಸಿ. ವಹಿಸಿದ್ದರು. ಎಸ್‌ಐಓ ಉಡುಪಿ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್ ಶಾರೂಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕೋಸ್ಟಲ್ ಮಿರರ್ನ ಪ್ರಶಾಂತ್ ಮೊಗವೀರ ವಂದಿಸಿ ದರು. ಸುಜೇಂದ್ರ ಹಂದೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News