ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರ ಬಂಧನ

Update: 2019-02-23 17:23 GMT

ಮಂಗಳೂರು, ಫೆ.23: ನಗರದ ಉರ್ವ ಮಾರ್ಕೆಟ್ ಮತ್ತು ಮಹಾನಗರ ಪಾಲಿಕೆ ಸಮೀಪ ರಾತ್ರಿ ಹೊತ್ತು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.

ಕುಳೂರು ಗುಡ್ಡೆಯಂಗಡಿ ನಿವಾಸಿ ಪ್ರಕಾಶ್ ಡಿಸೋಜ(25), ಮೂಡುಬಿದಿರೆ ಅಲಂಗಾರು ನಿವಾಸಿ ರೋಶನ್ (25) ಬಂಧಿತ ಆರೋಪಿಗಳು.

ಶನಿವಾರ ಬೆಳಗ್ಗಿನಜಾವ 1:30ರ ವೇಳೆಗೆ ಬರ್ಕೆ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಮಹಾನಗರ ಪಾಲಿಕೆ ಕಚೇರಿ ಸಮೀಪ ರೋಶನ್ ಎಂಬಾತ ಪೊಲೀಸರನ್ನು ನೋಡಿ ಅಡಗಿ ಕುಳಿತುಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಈ ಸಂದರ್ಭ ಪೊಲೀಸರು ನೋಡಿ ಆ ಕಡೆ ತೆರಳಿದ್ದಾಗ ಓಡುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೊಬ್ಬ ಸೆರೆ: ಮುಂಜಾನೆ 4:30ರ ವೇಳೆಗೆ ಉರ್ವ ಮಾರ್ಕೆಟ್ ವ್ಯಾಪ್ತಿಯಲ್ಲಿ ಪ್ರಕಾಶ್ ಡಿಸೋಜ ಎಂಬಾತ ತಿರುಗಾಡುತ್ತಿದ್ದು, ಪೊಲೀಸರನ್ನು ನೋಡಿ ಓಡುವ ಪ್ರಯತ್ನ ಮಾಡಿದ್ದಾನೆ. ಅವನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರನ್ನು ವಿಚಾರಣೆ ನಡೆಸಿದ್ದಾಗ ಅಸ್ಪಷ್ಟವಾಗಿ ಉತ್ತರಿಸಿದ ಕಾರಣ ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News