94 ಸಿ., 94ಸಿಸಿ ಕಲಂ ಅಡಿಯಲ್ಲಿ ಭೂ ಸಕ್ರಮಗೊಳಿಸಲು ಅವಧಿ ವಿಸ್ತರಣೆ: ಐವನ್ ಡಿಸೋಜ

Update: 2019-02-23 17:32 GMT

ಮಂಗಳೂರು, ಫೆ. 23: ಗ್ರಾಮಾಂತರ ಹಾಗೂ ನಗರ ಪ್ರದೇಶದ ಸರ್ಕಾರಿ ಜಮೀನುಗಳಲ್ಲಿ 2015ರ ಪೂರ್ವದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಕರ್ನಾಟಕ ಭೂ ಕಂದಾಯ ಕಾಯ್ದೆ 1960ರ ಕಾಲಂ 94ಸಿಸಿ ಮತ್ತು 94ಸಿಸಿ ಅಡಿಯಲ್ಲಿ ಅರ್ಜಿ ಕಲ್ಪಿಸಲು ನಿಗದಿ ಪಡಿಸಿದ್ದ ಅಂತಿಮ ದಿನಾಂಕವನ್ನು ಮಾ.31, 2019ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಸರಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವವರ ಜಮೀನುಗಳನ್ನು ಸಕ್ರಮಗೊಳಿಸಲು ಇದ್ದ ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಹೊಸ ಆದೇಶದ ಪ್ರಖಾರ ನಮೂನೆ 57ರಡಿಯಲ್ಲಿ 1990ರಿಂದ 2005ರವರೆಗೆ ಸರಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರು ವವರು ಸಕ್ರಮ ಗೊಳಿಸಲು ಮಾರ್ಚ್ 16, 2019ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

ಭೂ ಪರಿವರ್ತನೆಗೆ ಆನ್ ಲೈನ್ ಮೂಲಕ ಅರ್ಜಿ

ಭೂ ಪರಿವರ್ತನೆಗೆ ಕಂದಾಯ ಇಲಾಖೆಗೆ ಇಂದಿನಿಂದ ರಾಜ್ಯಾದ್ಯಂತ ಆನ್ ಲೈನ್ ಮೂಲಕ ಅಫಿಡವಿಟ್ ಆಧಾರಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್ ಲೈನ್ ಸೌಲಭ್ಯ ಇಲ್ಲದೆ ಇರುವವರು ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಐವನ್ ಡಿ ಸೋಜ ತಿಳಿಸಿದ್ದಾರೆ.

ಕೇಂದ್ರ ಸರಕಾರ ಘೋಷಿಸಿರುವ ಬರಪರಿಹಾರದ ಒಟ್ಟು ಮೊತ್ತ ರೂ 949.49ಕೋಟಿ ಮೊತ್ತವನ್ನು ರಾಜ್ಯಸರಕಾರಕ್ಕೆ ಇನ್ನೂ ಬಿಡುಗಡೆ ಮಾಡಿಲ್ಲ ರಾಜ್ಯದ 156 ಬರಪೀಡಿತ ತಾಲುಕಗಳ ಪೈಕಿ 107 ತಾಲೂಕುಗಳಲ್ಲಿ ತೀವ್ರವಾದ ಬರದ ಸಮಸ್ಯೆ ಇದೆ ತ್ವರಿತವಾಗಿ ಪರಿಹಾರ ನೀಡಬೇಕೆಂದು ಎಂದು ಐವನ್ ತಿಳಿಸಿದ್ದಾರೆ.

ಸಿ.ಎಂ. ಪರಿಹಾರ ನಿಧಿಯಿಂದ ರೂ 4,54,029 ಮೊತ್ತವನ್ನು ಸಂಕಷ್ಟದಲ್ಲಿರುವ 8 ಜನ ಅರ್ಜಿದಾರರಿಗೆ ಬಿಡುಗಡೆಮಾಡಿರುವುದಾಗಿ ಐವನ್ ತಿಳಿಸಿದ್ದಾರೆ. ಕಂದಾಯ ಸಮಸ್ಯೆ ಪರಿಹಾರಕ್ಕೆ ಫೆ.2ರಂದು ಮೂಡಬಿದ್ರೆ ಹಾಗೂ ಅಪರಾಹ್ನ ಮಂಗಳೂರು ತಾಲೂಕು ಕಚೇರಿಯಲ್ಲಿ ಜನರ ಅಹವಾಲು ಸ್ವೀಕರಿಸುವುದಾಗಿ ಐವನ್ ಡಿಸೋಜ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News