×
Ad

ಅಬ್ಬಕ್ಕ ಉತ್ಸವದ ಪೂರ್ವಭಾವಿಯಾಗಿ ಬೀಚ್ ಸ್ವಚ್ಛತೆ

Update: 2019-02-24 18:34 IST

ಮಂಗಳೂರು, ಫೆ.24: ಉಳ್ಳಾಲದ ಕಡಲ ಕಿನಾರೆಯಲ್ಲಿ ಮಾರ್ಚ್ 2 ಮತ್ತು 3ರಂದು ನಡೆಯಲಿರುವ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವಕ್ಕೆ ಪೂರ್ವಭಾಯಾಗಿ ರವಿವಾರ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಉಳ್ಳಾಲ ನಗರಸಭೆ ಮತ್ತು ಸುತ್ತಮುತ್ತಲ ಶಾಲಾ ವ್ಯಾಪ್ತಿಯ ವಿದ್ಯಾರ್ಥಿಗಳಿಂದ ಉಳ್ಳಾಲ ಬೀಚ್ ಸ್ವಚ್ಛತೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರ ಸಹಕಾರದೊಂದಿಗೆ ಉಳ್ಳಾಲ ನಗರಸಭೆಯು ಕಡಲ ಕಿನಾರೆಯಲ್ಲಿದ್ದ ಒಂದು ಟನ್ ಕಸವನ್ನು ವಿಲೇ ಮಾಡಿಸಿತು.
ಉಳ್ಳಾಲ ನಗರಸಭೆಯ ಆಯುಕ್ತೆ ವಾಣಿ ಆಳ್ವ ಬೀಚ್ ಸ್ವಚ್ಛತೆಗೆ ಚಾಲನೆ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತು ಜಿಪಂ ಸಿಇಒ ಡಾ. ಸೆಲ್ವಮಣಿ ಆರ್. ಅಬ್ಬಕ್ಕ ಉತ್ಸವದ ಯಶಸ್ಸಿಗೆ ಸ್ಥಳೀಯರ ಸಹಕಾರ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News