×
Ad

ಇಂಡಿಯನ್ ನ್ಯಾಷನಲ್ ಪೋರ್ಟ್, ಡಾಕ್ ವರ್ಕರ್ಸ್‌ ಫೆಡರೇಶನ್ ಸಭೆ

Update: 2019-02-24 18:35 IST

ಮಂಗಳೂರು, ಫೆ. 24: ಕಾರ್ಮಿಕರು ದೇಶದ ಆರ್ಥಿಕ ಬೆಳವಣಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಖಾಸಗೀಕರಣ ಕೂಡ ತ್ವರಿತಗತಿಯಲ್ಲಿ ಆಗುತ್ತಿದ್ದು, ಅಸಂಘಟಿತ ಕಾರ್ಮಿಕರು ಅತಂತ್ರರಾಗಿದ್ದಾರೆ. ಹಾಗಾಗಿ ಅಸಂಘಟಿತ ಕಾರ್ಮಿಕರ ಹಿತದ ಬಗ್ಗೆ ಚಿಂತಿಸುವುದರೊಂದಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಲು ಪ್ರಯತ್ನಿಸಬೇಕಾಗಿದೆ ಎಂದು ಮಾಜಿ ಸಂಸದ ಹಾಗೂ ಇಂಡಿಯನ್ ನ್ಯಾಷನಲ್ ಪೋರ್ಟ್ ಮತ್ತು ಡಾಕ್ ವರ್ಕರ್ಸ್‌ ಫೆಡರೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಸಮಂತರಾಯ್ ಹೇಳಿದರು.

ರವಿವಾರ ನಗರದ ಖಾಸಗಿ ಹೊಟೇಲಿನಲ್ಲಿ ಆಯೋಜಿಸಲಾದ ಇಂಡಿಯನ್ ನ್ಯಾಷನಲ್ ಪೋರ್ಟ್ ಮತ್ತು ಡಾಕ್ ವರ್ಕರ್ಸ್‌ ಫೆಡರೇಶನ್(ಇಂಟಕ್ )ವರ್ಕಿಂಗ್ ಕಮಿಟಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಬಂದರುಗಳು ಅಭಿವೃದ್ಧಿಯ ಹೆಬ್ಬಾಗಿಲು ಆಗಿದೆ. ಸಾವಿರಾರು ಕಾರ್ಮಿಕರು ಈ ಬಂದರುಗಳಲ್ಲಿ ದುಡಿಯುತ್ತಿದ್ದಾರೆ.ಇವರಿಗೆ ಸಿಗಬೇಕಾದ ಸವಲತ್ತು ಪಡೆಯಲು ಹೋರಾಟ ಅನಿವಾರ್ಯ. ಈ ನಿಟ್ಟಿನಲ್ಲಿ ಇಂಟಕ್ ಪ್ರಬಲವಾಗಿ ಹೋರಾಡುತ್ತಾ ಬಂದಿದೆ. ಮುಂದೆಯೂ ಕಾರ್ಮಿಕರ ಹಿತಕ್ಕಾಗಿ ನ್ಯಾಯಯುತ ಹೋರಾಟ ನಡೆಸಲಿದೆ ಎಂದು ಸಮಂತರಾಯ್ ನುಡಿದರು.

ಮಾಜಿ ಐಎಲ್‌ಒ ಪ್ರತಿನಿಧಿ ಹಾಗೂ ಮಾಜಿ ಇಂಟಕ್ ರಾಜ್ಯಾಧ್ಯಕ್ಷ ಎನ್.ಎಂ.ಅಡ್ಯಂತಾಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಫೆಡರೇಶನ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಕಲನ್, ರಾಷ್ಟ್ರೀಯ ಕಾರ್ಯಾಧ್ಯಕ್ಷ ಮೋಹನ್ ಅಶ್ವಿನಿ, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ನವಮಂಗಳೂರು ಬಂದರಿನ ಟ್ರಸ್ಟಿ ಅಬೂಬಕರ್, ರಾಜ್ಯ ಇಂಟಕ್ ಉಪಾಧ್ಯಕ್ಷ ಸಿ.ಎ. ರಹೀಂ, ಜಿಲ್ಲಾ ಇಂಟಕ್ ಅಧ್ಯಕ್ಷ ಮನೋಹರ ಶೆಟ್ಟಿ, ಆಲ್ ಇಂಡಿಯಾ ಶಿಪ್ಪಿಂಗ್ ವಿಭಾಗದ ಪ್ರಧಾನ ಕಾರ್ಯದರ್ಶಿ ಕವಿತಾ ಸನಿಲ್, ಫೆಡರೇಶನ್‌ನ ಆರ್ಗನೈಸಿಂಗ್ ಸೆಕ್ರೆಟರಿ ಶಿವಣ್ಣ, ಎನ್‌ಎಂಪಿಟಿ ಪೋರ್ಟ್ ಆ್ಯಂಡ್ ಡಾಕ್ ವರ್ಕರ್ಸ್‌ ಯೂನಿಯನ್‌ನ ಕಾರ್ಯಾಧ್ಯಕ್ಷ ಫಾರೂಕ್, ರಾಜ್ಯ ಇಂಟಕ್ ಮುಖಂಡರಾದ ಡಿ.ಆರ್. ನಾರಾಯಣ್, ಜಯ ಸುವರ್ಣ, ಹರೀಶ್,ಸಿ.ಹಮೀದ್, ಭರತ್,ಟಿ.ಕೆ.ಕೋಯ, ಸಂಪತ್ ನಾಕ್, ಸುರೇಶ್ಚಂದ್ರ, ಸುಕುಮಾರ್ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News