×
Ad

‘ಯೂಜಿಕೊನ್-2019’ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

Update: 2019-02-24 20:29 IST

ಉಡುಪಿ, ಫೆ. 24: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ವತಿಯಿಂದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ ಆಯುರ್ವೇದದ ವಿಶೇಷ ಚಿಕಿತ್ಸಾ ಸೂತ್ರಗಳಾದ ರಸಾಯನ ಹಾಗೂ ವಾಜೀಕರಣಗಳ ಕುರಿತ ‘ಯೂಜಿಕೊನ್-2019’ ರಾಷ್ಟ್ರೀಯ ಸಮ್ಮೇಳನವನ್ನು ರವಿವಾರ ಕಾಲೇಜಿನ ಭಾವಪ್ರಕಾಶ ಸಭಾಂಣದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಬೆಳಗಾಂ ಬಿ.ಎಂ.ಕಂಕನವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಸ್.ಪ್ರಸಾದ್ ಔಷಧ ಮತ್ತು ಪುಸತಿಕಗಳ ಮಳಿಗೆಗಳ ಪ್ರದರ್ಶನ ಮತ್ತು ಸಮ್ಮೇಳನವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಅನೇಕ ಸಂಶೋಧನಾ ಪ್ರಬಂಧಗಳ ಸಾರವನ್ನು ದಾಖಲೀಕರಿಸಿದ ಯೂಜಿನಿಕೊನ್ ಸಂಗ್ರಹ ಪುಸ್ತಕವನ್ನು ಲೋಕಾರ್ಪಣೆಗೈದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಂಶುಪಾಲ ಡಾ.ಜಿ.ಶ್ರೀನಿವಾಸ್ ಆಚಾರ್ಯ, ರಸಶಾಸ್ತ್ರ ಹಾಗೂ ಬೈಷಜ್ಯಕಲ್ಪನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಡಾ.ರವೀಂದ್ರ ಅಂಗಡಿ ಮತ್ತು ಶಲ್ಯತಂತ್ರ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಡಾ.ರಜನೀಶ್ ಗಿರಿ ಅವರ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಸ್ನಾತಕೋತ್ತರ ಮತ್ತು ಪಿಎಚ್‌ಡಿ ಅಧ್ಯಯನ ಕೇಂದ್ರದ ಡೀನ್ ಡಾ.ನಿರಂಜನ್ ರಾವ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸುಚೇತ ಕುಮಾರಿ, ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ. ಉಪಸ್ಥಿತರಿದ್ದರು.

ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ.ನಾಗರಾಜ್ ಎಸ್. ಸ್ವಾಗತಿಸಿದರು. ಕಾಯಚಿಕಿತ್ಸಾ ಮತ್ತು ಮಾನಸರೋಗ ವಿಭಾಗದ ಸಹಪ್ರಾಧ್ಯಪಕ ಡಾ.ವಿಜಯೇಂದ್ರ ಭಟ್ ವಂದಿಸಿದರು. ಶಲ್ಯತಂತ್ರ ವಿಭಾಗದ ಸಹಪ್ರಾಧ್ಯಪಕ ಡಾ.ರಾಕೇಶ್ ಆರ್.ಎನ್. ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನದಲ್ಲಿ ದೇಶದ ವಿವಿಧ ಸಂಸ್ಥೆಗಳಿಂದ 500 ಪ್ರತಿನಿಧಿಗಳು ಭಾಗವಹಿಸಿದ್ದು, ಸುಮಾರು 300ಕ್ಕೂ ಅಧಿಕ ಪ್ರಬಂಧಗಳು ಮತ್ತು ಭಿತ್ತಿಪತ್ರಗಳು ಮಂಡನೆಯಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News