ಮೌಲ್ಯಯುತ ಬದುಕೇ ದೊಡ್ಡ ಸಾಹಿತ್ಯ: ಬಿ.ಸಿ.ರಾವ್ ಶಿವಪುರ
ಹೆಬ್ರಿ, ಫೆ. 24: ಸಾಹಿತ್ಯ ಸತ್ಯವನ್ನೇ ಹೇಳಬೇಕೆ ಹೊರತು ಬದುಕನ್ನು ವಿಭಜಿಸಬಾರದು. ಸತ್ಯ ಸಾಹಿತ್ಯವಾಗಿ ಬದುಕಿನೊಂದಿಗೆ ಬೆಸೆದಾಗ ಸುಂದರ ಮತ್ತು ಶ್ರೇಷ್ಠ ಸಾಹಿತ್ಯವಾಗುತ್ತದೆ. ಬದುಕು ವೌಲ್ಯದಿಂದ ಕೂಡಿದರೆ ಅದೇ ದೊಡ್ಡ ಸಾಹಿತ್ಯ. ಮಾನವೀಯ ವೌಲ್ಯಗಳನ್ನು ಎತ್ತಿ ಹಿಡಿಯುವುದು ಸಾಹಿತ್ಯದ ಆಶಯವಾಗಿದೆ ಎಂದು ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ.ಸಿ.ರಾವ್ ಶಿವಪುರ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹೆಬ್ರಿ ತಾಲ್ಲೂಕು ಘಟಕದ ವತಿ ಯಿಂದ ಅನಂತ ಪದ್ಮನಾ ಸನ್ನಿಧಿಯ ಸಭಾಭವನದಲ್ಲಿ ಸೀತಾನದಿ ಗಣಪಯ್ಯ ಶೆಟ್ಟಿ ವೇದಿಕೆಯಲ್ಲಿ ಶುಕ್ರವಾರ ನಡೆದ ಹೆಬ್ರಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕನ್ನಡ ಕಲಿತವರಿಗೆ ಸರಕಾರ ಕರೆದು ಉದ್ಯೋಗ ನೀಡುವ ಠರಾವು ಮಂಡನೆ ಯಾಗಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ಬದುಕಿನ ವಿಚಾರಗಳು ಹೆಚ್ಚು ಪ್ರಸ್ತಾಪ ವಾಗಬೇಕು. ಮನುಷ್ಯನ ಹಿತ ಬಯಸುವ ಎಲ್ಲಾ ಸೃಜನಶೀಲ ಚಟುವಟಿಕೆಗಳು ನಡೆಸುವ ಮೂಲಕ ಖುಷಿ ನೀಡಬೇಕು. ನೊಂದವರಿಗೆ ನೆರವಾಗುವ, ನೆನಪಾಗುವ, ಪ್ರೀತಿಸುವ ಹೃದಯಕ್ಕೆ ಉಸಿರಾಗುವ ವಿಚಾರಗಳು ಸಾಹಿತ್ಯದಲ್ಲಿ ಬರಬೇಕು ಎಂದರು.
ಸಮ್ಮೇಳನವನ್ನು ಮುದ್ರಾಡಿ ದಿವ್ಯಾ ಸಾಗರ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಸಿರಿಬೀಡು ದಿವಾಕರ ಶೆಟ್ಟಿ ಹಾಗೂ ಪುಸ್ತಕ ಮಳಿಗೆಯನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.
ರಾಷ್ಟ್ರಧಜಾರೋಹಣವನ್ನು ಗ್ರಾಪಂ ಅಧ್ಯಕ್ಷ ಎಚ್.ಕೆ. ಸುಧಾಕರ್ ನೆರವೇರಿಸಿ ದರು. ನೀರೆ ಕೃಷ್ಣ ಶೆಟ್ಟಿ ಬರೆದ ಸತ್ಯನಾಪುರದ ತುಳುನಾಡ ಸಿರಿ ಮತ್ತು ಸಂತು ಮುದ್ರಾಡಿ ಅವರ ‘ಬಾವ ತರಂಗ’ ಪುಸ್ತಕವನ್ನು ಸಾಹಿತಿ ಅಂಬಾತನಯ ಮುದ್ರಾಡಿ ಬಿಡುಗಡೆ ಮಾಡಿದರು.
ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಭಾಸ್ಕರ ಜೋಯಿಸ್, ಹೆಬ್ರಿ ಅನಂತ ಪದ್ಮನಾ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್.ತಾರಾನಾಥ ಬಲ್ಲಾಳ್, ತಾಣ ದೇವಸ್ಥಾನದ ನವೀನ್ ಬಲ್ಲಾಳ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಆರ್.ಮಂಜುನಾಥ್, ಕಸಾಪ ಜಿಲ್ಲಾ ಘಟಕದ ಪ್ರಮುಖರಾದ ಸುಬ್ರಹ್ಮಣ್ಯ ಶೆಟ್ಟಿ, ನಾರಾಯಣ ಮಡಿ, ಆರೂರು ತಿಮ್ಮಪ್ಪ ಶೆಟ್ಟಿ, ಕಾರ್ಕಳ ತಾಲ್ಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಕಾರ್ಕಳ ತಾಪಂ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಸದಸ್ಯರಾದ ಶಿವಪುರ ರಮೇಶ್ ಕುಮಾರ್, ಅಮೃತ್ ಕುಮಾರ್ ಶೆಟ್ಟಿ, ಗ್ರಾಪಂ ಅಧ್ಯಕ್ಷರಾದ ಮುದ್ರಾಡಿಯ ಶಶಿಕಲಾ ಡಿ.ಪೂಜಾರಿ, ನಾಡ್ಪಾಲಿನ ಜಲಜ ಪೂಜಾರಿ, ಶಿಕ್ಷಕರ ಸಂಘದ ಉಮೇಶ ನಾಯಕ್, ಕಸಾಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಮೊದಲಾದ ವರು ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಚ್.ಯೋಗೀಶ ಭಟ್ ಸ್ವಾಗತಿಸಿ ದರು. ಹೆಬ್ರಿ ತಾಲ್ಲೂಕು ಘಟಕ ಅಧ್ಯಕ್ಷ ಪಿ.ವಿ.ಆನಂದ ಸಾಲಿಗ್ರಾಮ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಮಾತಿಬೆಟ್ಟು ಪ್ರಕಾಶ ಪೂಜಾರಿ ಮತ್ತು ಮಾಲತಿ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ಭಟ್ ವಂದಿಸಿದರು.