ಮುಸ್ಲಿ, ಕ್ರೈಸ್ತರೂ ನಮ್ಮವರೇ : ಆತ್ರಾಡಿ ಅಮೃತಾ ಶೆಟ್ಟಿ
ಮೂಡುಬಿದಿರೆ, ಫೆ. 24: ಕರಾವಳಿಯಲ್ಲಿ ಮುಸಲ್ಮಾನರನ್ನು ಗೋಹತ್ಯೆ ಮಾಡುವವರು, ನಮ್ಮ ಹೆಣ್ಣು ಮಕ್ಕಳ ಜತೆ ಕೆಟ್ಟದಾಗಿ ವರ್ತಿಸುವವರು, ಭಯೋತ್ಪಾದಕತೆಯನ್ನು ಬೆಂಬಲಿಸುವವರು ಎಂದು ಬಿಂಬಿಸಲಾಗುತ್ತಿದೆ. ಆದರೆ ನಮ್ಮಲ್ಲಿನ ಮುಸಲ್ಮಾನರು ಮೂಲತಃ ಮಕ್ಕಾದವರಲ್ಲ, ಇಲ್ಲಿನ ಕ್ರೈಸ್ತರೂ ಜೆರುಸಲೇಂನವರಲ್ಲ. ಅವರ ಪೂರ್ವಜರ ಬಗ್ಗೆ ಪರಿಶೀಲಿಸಿದರೆ ಅವರೂ ನಮ್ಮ ನೆಲದವರೇ. ಎಲ್ಲೋ ಕರುಳ ಸಂಬಂಧ ತಪ್ಪಿ ಹೋಗಿದೆ. ನಾವೆಲ್ಲರೂ ಒಂದಾಗಿ ಮುನ್ನಡೆಯಬೇಕಾದ ಅಗತ್ಯವಿದೆ ಎಂದು ಬಹುಜನ ಸಮಾಜವಾದಿ ಪಾರ್ಟಿಯ ಮೈಸೂರು ವಿಭಾಗೀಯ ಉಸ್ತುವಾರಿ ಆತ್ರಾಡಿ ಅಮೃತಾ ಶೆಟ್ಟಿ ಹೇಳಿದರು.
ಅವರು ರವಿವಾರ ಸಮಾಜ ಮಂದಿರದಲ್ಲಿ ಮೂಡುಬಿದಿರೆ ನಗರ ಘಟಕದ ವತಿಯಿಂದ ಜರಗಿದ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ)ಬಿಎಸ್‍ಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅವಕಾಶ ವಂಚಿತ ಅರ್ಹರಿಗೆ ಅಧಿಕಾರ ಸಿಗುವಂತಾಗಬೇಕು ಜನತೆಗೆ ಸಮಪಾಲು, ಸಮಬಾಳು ಸಿಗಬೇಕು ಎಂಬ ತತ್ವಾದರ್ಶದಲ್ಲಿ ಬಿ.ಎಸ್.ಪಿ ಅಲ್ಪಾವಧಿಯಲ್ಲೇ ರಾಷ್ಟ್ರೀಯ ಪಕ್ಷವಾಗಿ ಬೆಳೆದಿದೆ ಎಂದವರು ಹೇಳಿದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಸಾಣೂರು ಸತೀಶ್ ಸಾಲ್ಯಾನ್, ಅಧಿಕಾರ ಹೀನತೆಯೇ ಅಸ್ಪøಶ್ಯತೆ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿ ಕೊಳ್ಳಬೇಕು. ಈ ತಿಳುವಳಿಕೆ ನೀಡಿದ ಅಂಬೇಡ್ಕರ್ ಬರೇ ದಲಿತರಿಗೆ ಮಾತ್ರವಲ್ಲದ ಮನುಕುಲದ ನಾಯಕ. ಅಧಿಕಾರದ ಆಸೆಗಾಗಿ ಇಂದಿಗೂ ಜೀವಂತವಾಗಿರುವ ಕಾಂಗ್ರೆಸ್‍ನಂತಹ ಪಕ್ಷಗಳು ಧರ್ಮ,ಜಾತಿಯ ಹೆಸರಲ್ಲಿ ಯುವಜನತೆಯನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.
ಪಕ್ಷದ ಮಂಗಳೂರು ವಿಭಾಗ ಉಸ್ತುವಾರಿ ವೇಲಾಯುಧನ್ ಮಾತನಾಡಿ ನಮ್ಮಲ್ಲಿ ಜಾತೀಯ ಕಟ್ಟುಪಾಡುಗಳಿಂದ ರೋಸಿ ಹೋದವರು ಅನ್ಯ ಧರ್ಮೀಯರಾಗಿ ನಮ್ಮಿಂದ ದೂರವಿದ್ದಾರೆ. ಇಂದು ವೈರಿಗಳಂತಿದ್ದಾರೆ. ಆದರೆ ಅಧಿಕಾರವಿದ್ಧಾಗ ಅಲ್ಪ ಸಂಖ್ಯಾತರನ್ನು ಮುಟ್ಟಲಾಗದು. ನಾವೆಂದಿಗೂ ನೀಡುವವರಾಗೋಣ, ಬೇಡುವವರಾಗದಿರೋಣ ಎಂದರು. ಇನ್ನೋರ್ವ ವಿಭಾಗ ಉಸ್ತುವಾರಿ ರಘು ಧರ್ಮಸೇನ ಮಾತನಾಡಿ ಗೋಹತ್ಯೆ, ಜಿ.ಎಸ್.ಟಿ ಹೀಗೆ ಕಾಂಗ್ರೆಸ್ ರೂಪಿಸಿದ್ದೆಲ್ಲವನ್ನೂ ಬಿಜೆಪಿ ಜಾರಿ ಮಾಡುತ್ತಿದೆ. ಬದುಕು ಕಟ್ಟಿಕೊಳ್ಳಲಾಗದೇ ಬರೇ ವೋಟ್ ಹಾಕಿದರೆ ಪ್ರಜಾಪ್ರಭುತ್ವ ಅರ್ಥಪೂರ್ಣವಾಗದು ಎಂದವರು ಆರೋಪಿಸಿದರು.
ನಗರ ಸಮಿತಿ ಅಧ್ಯಕ್ಷ ಎಂ.ರಮೇಶ್ ಭೋಧೀ ಮುಂಬರುವ ಲೋಕಸಭೆ ಮತ್ತು ಮೂಡುಬಿದಿರೆ ಪುರಸಭೆ ಚುನಾವಣೆಯಲ್ಲಿ ಪುರಸಭೆಯ ಎಲ್ಲಾ 23 ವಾರ್ಡ್‍ಗಳಲ್ಲಿ ಬಿಎಸ್‍ಪಿ ಸ್ಪರ್ಧಿಸಲು ಚಿಂತಿಸಿದೆ ಎಂದರು. ಪಕ್ಷದ ಜಿಲ್ಲಾ ಉಸ್ತುವಾರಿ ಗೋಪಾಲ್ ಮುತ್ತೂರು,ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಶಕುಂತಲಾ ಉಪಸ್ಥಿತರಿದ್ದರು. ಮೂಡುಬಿದಿರೆಯ ಉದ್ಯಮಿ ಎಂ.ಕೆ. ಅಬೂಬಕರ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ನಗರ ಸಮಿತಿ ಅಧ್ಯಕ್ಷ ರಮೇಶ್ ಬೋಧಿ ಗುರುವಾರ ಸುದ್ದಿಗೋಷ್ಢಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಭೆಯನ್ನು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಉದ್ಘಾಟಿಸುವರು. ಪಕ್ಷದ ಜಿಲ್ಲಾಧ್ಯಕ್ಷ ಸಾಣೂರು ಸತೀಶ್ ಸಾಲ್ಯಾನ್, ಮೈಸೂರು ವಿಭಾಗೀಯ ಉಸ್ತುವಾರಿ ಆತ್ರಾಡಿ ಅಮೃತಾ ಶೆಟ್ಟಿ, ಮಂಗಳೂರು ವಿಭಾಗದ ಉಸ್ತುವಾರಿ ಮೇಲಾಯುಧನ್, , ಮೂಡುಬಿದಿರೆ ಕ್ಷೇತ್ರ ಅಧ್ಯಕ್ಷ ರಾಕೇಶ್ ಕುಂದರ್, ಜಿಲ್ಲಾ ಉಸ್ತುವಾರಿಗಳಾದ ಗೋಪಾಲ್ ಮುತ್ತೂರು, ನಾvರಾಯಣ ಬೋಧ್, ಜಿಲ್ಲಾ ಕಾರ್ಯದರ್ಶಿ ವಸಂತ ಮುಂಡೋಡಿ, ಖಜಾಂಜಿ ಎನ್.ಎಸ್ ಭಾಸ್ಕರ ಮಾರೂರು ಭಾಗವಹಿಸುವರು.
ಪುರಸಭೆಗೆ ಸ್ಪರ್ಧೆ: ಮುಂಬರುವ ಲೋಕಸಭೆ ಮತ್ತು ಮೂಡುಬಿದಿರೆ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಸಂಘಟಿಸಲು ಬಿಎಸ್ಪಿ ಕಾರ್ಯಕರ್ತರ ಸಭೆ ನಡೆಸಲಾಗುವುದು. ಮೂಡುಬಿದಿರೆ ಪುರಸಭೆಯ ಎಲ್ಲಾ 23 ವಾರ್ಡ್‍ಗಳಲ್ಲಿ ಬಿಎಸ್‍ಪಿ ಸ್ಪರ್ಧಿಸಲು ಚಿಂತಿಸಿದೆ ಎಂದರು. ಬಿಎಸ್‍ಪಿ ಮುಖಂಡರಾದ ಎನ್.ಎಸ್ ಭಾಸ್ಕರ್, ಉಪಸ್ಥಿತರಿದ್ದರು.