ಉಳ್ಳಾಲ ಡಿವೈಎಫ್‌ಐನಿಂದ ಸಾಂಗತ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಟ
ಮಂಗಳೂರು, ಫೆ.24: ಡಿವೈಎಫ್‌ಐ ಉಳ್ಳಾಲ ವಲಯ ಸಮಿತಿಯಿಂದ ಅಗಲಿದ ಯುವಜನ ಚಳವಳಿಯ ಸಂಗಾತಿಗಳಾದ ಸಂದೇಶ್ ಪಿಲಾರ್, ಶಿವಶಂಕರ್ ಪಿಲಾರ್ ಅವರ ಸ್ಮರಣಾರ್ಥ ಸಾಂಗತ್ಯ-2019 ಕ್ರಿಕೆಟ್ ಪಂದ್ಯಾವಳಿಯನ್ನು ಕಲ್ಲಾಪು ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು.
ಒಟ್ಟು 16 ಘಟಕಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಪಿಲಾರ್ ಡಿವೈಎಫ್‌ಐ ಘಟಕ ಪ್ರಥಮ ಸ್ಥಾನ ಪಯಿತು. ಚೆಂಬುಗುಡ್ಡೆ ಡಿವೈಎಫ್‌ಐ ಘಟಕ ದ್ವಿತೀಯ ಸ್ಥಾನ ಪಡೆಯಿತು.
ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂದೇಶ್ ಪಿಲಾರ್ ಅವರ ಅಕ್ಕ ಸೌಮ್ಯ, ಬಾವ ಸಂಜೀವ ಪಿಲಾರ್, ಶಿವಶಂಕರ್ ಪಿಲಾರ್ ಅವರ ಚಿಕ್ಕಪ್ಪ ಆನಂದ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸಿಪಿಐಎಂ ಕಾರ್ಯದರ್ಶಿ ಕೃಷ್ಣಪ್ಪ ಸಾಲಿಯಾನ್, ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘದ ವೇಣುಗೋಪಾಲ್, ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷ ಜೀವನ್ ರಾಜ್ ಕುತ್ತಾರ್, ಕಾರ್ಯದರ್ಶಿ ರಜಾಕ್ ಮೊಂಟೆಪದವು, ಉಪಾಧ್ಯಕ್ಷ ರಫೀಕ್ ಹರೇಕಳ, ಸಂತೋಷ್ ಪಿಲಾರ್, ಗ್ರಾಪಂ ಸದಸ್ಯ ಅಶ್ರಫ್ ಹರೇಕಳ ಪಾಲ್ಗೊಂಡರು.
ಅಶ್ರಫ್ ಕೆ.ಸಿ.ರೋಡ್ ಸ್ವಾಗತಿಸಿದರು. ಸುನಿಲ್ ತೇವುಲ ವಂದಿಸಿದರು.