ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಹೊತ್ತು 2 ಕಿ.ಮೀ. ಓಡಿದ ಪೊಲೀಸ್ ಪೇದೆ: ವಿಡಿಯೋ ವೈರಲ್

Update: 2019-02-24 17:27 GMT

ಭೋಪಾಲ್, ಫೆ.24: ಕರ್ತವ್ಯದ ಬದ್ಧತೆ ಪ್ರದರ್ಶಿಸಿದ ಪೊಲೀಸ್ ಪೇದೆಯೊಬ್ಬರು ಗಾಯಾಳು ವ್ಯಕ್ತಿಯನ್ನು ಹೆಗಲಲ್ಲಿ ಹೊತ್ತುಕೊಂಡು ಕಾಡಿನ ನಡುವೆ ಹಾದುಹೋಗುವ ರೈಲ್ವೆ ಹಳಿಯಲ್ಲಿ ಎರಡು ಕಿಲೋಮೀಟರ್ ವರೆಗೆ ಓಡಿ ಆ್ಯಂಬುಲೆನ್ಸ್‍ಗೆ ತಲುಪಿಸಿದ ಘಟನೆ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಗಂಭೀರ ಸ್ಥಿತಿಯಲ್ಲಿರುವ ಗಾಯಾಳುವಿಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೂನಮ್‍ ಚಂದ್ರ ಬಿಲ್ಲೋರ್ ಎಂಬ ಪೊಲೀಸ್ ಪೇದೆ ಗಾಯಾಳು ಪ್ರಯಾಣಿಕ ಅಜಿತ್ ಎಂಬಾತನನ್ನು ಹೆಗಲಲ್ಲಿ ಹೊತ್ತುಕೊಂಡು ಟ್ರ್ಯಾಕ್‍ ನಲ್ಲಿ ಓಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಾಯಾಳು ಬಿದ್ದ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲದ ಕಾರಣ ಅಲ್ಲಿಗೆ ಆ್ಯಂಬುಲೆನ್ಸ್ ಬರುವಂತಿರಲಿಲ್ಲ. ಆಗ ಬಿಲ್ಲೋರ್, ರಕ್ತ ಸುರಿಯುತ್ತಿದ್ದ ವ್ಯಕ್ತಿಯನ್ನು ಹೆಗಲಲ್ಲಿ ಹೊತ್ತು 2 ಕಿಲೋಮೀಟರ್ ಒಯ್ದು ಸುರಕ್ಷಿತವಾಗಿ ಆ್ಯಂಬುಲೆನ್ಸ್‍ಗೆ ತಲುಪಿಸಿದ್ದಾರೆ.

"ಆ ವ್ಯಕ್ತಿಗೆ ತೀವ್ರ ರಕ್ತಸ್ರಾವ ಆಗುತ್ತಿತ್ತು. ನಾನು ಸ್ಟ್ರೆಚರ್‍ ಗೆ ಕಾದರೆ ಆತ ಸತ್ತೇ ಹೋಗುತ್ತಿದ್ದ. ಆದ್ದರಿಂದ ಹೆಗಲ ಮೇಲೆ ಹೊತ್ತುಕೊಂಡು ಸಾಧ್ಯವಾದಷ್ಟೂ ಬೇಗ ಆ್ಯಂಬುಲೆನ್ಸ್ ಕಡೆಗೆ ನಡೆದೆ" ಎಂದು ಬಿಲ್ಲೋರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News