×
Ad

ಉಳ್ಳಾಲ ದರ್ಗಾದಲ್ಲಿ ಉಚಿತ ವೈದ್ಯಕೀಯ ಶಿಬಿರ

Update: 2019-02-24 23:06 IST

ಉಳ್ಳಾಲ, ಪೆ. 24 : ಅರೆಹೊಟ್ಟೆ ಆಹಾರ ಸೇವನೆ ಕುರ್ ಆನ್ ಆದೇಶವಾಗಿದ್ದರೂ, ನಾವಿಂದು ರುಚಿ ಮತ್ತು ಹೊಸ ಹೆಸರಿನ ಆಹಾರಕ್ಕೆ ಮಾರುಹೋಗಿ ಅಗತ್ಯಕ್ಕಿಂತ ಅಧಿಕ ಆಹಾರ ಸೇವನೆ ಮೂಲಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. 

ಕೇಂದ್ರ ಜುಮಾ ಮಸೀದಿ ಮತ್ತು ಹಝ್ರತ್ ಸಯ್ಯಿದ್ ಮದನಿ ದರ್ಗಾ ಸಮಿತಿಯಿಂದ ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜಿನ ಸಹಕಾರದಲ್ಲಿ ರವಿವಾರ ದರ್ಗಾ ವಠಾರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಇಂದಿನ ಆಧುನಿಕ ಆಹಾರ ಪದ್ಧತಿಯಿಂದಾಗಿ ಕಾಯಿಲೆ ಹೆಚ್ಚಾಗುತ್ತಿದ್ದು, ಅದೇ ರೀತಿ ಆಸ್ಪತ್ರೆಗಳೂ ಹೆಚ್ಚಾಗಿವೆ. ಉಳ್ಳಾಲ ವ್ಯಾಪ್ತಿಯಲ್ಲೇ ನಾಲ್ಕು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಆದರೂ ಕಾಯಿಲೆ ಬಂದಾಗ ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳನ್ನು ಕಡೆಗಣಿಸಿ ಚಿಕಿತ್ಸೆಗಾಗಿ ಅರ್ಜಿ ಹಿಡಿದು ಬೇಡುವುದನ್ನು ಕಾಣುತ್ತಿದ್ದೇವೆ ಎಂದು ಹೇಳಿದರು. 

ಕಣಚೂರು ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ಮಾಡಿದರು. ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್, ಖತೀಬ್ ಅಬ್ದುಲ್ ಅಝೀಝ್ ಬಾಖವಿ, ಮುಫತ್ತಿಸ್ ಸುಲೈಮಾನ್ ಸಖಾಫಿ, ಪ್ರಾಂಶುಪಾಲ ಝೈನ್ ಸಖಾಫಿ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಪದಾಧಿಕಾರಿಗಳಾದ ಬಾವ ಮುಹಮ್ಮದ್, ಯು.ಕೆ.ಇಲ್ಯಾಸ್, ನೌಷಾದ್ ಮೇಲಂಗಡಿ, ಯು.ಟಿ.ಇಲ್ಯಾಸ್, ಅಝಾದ್ ಇಸ್ಮಾಯಿಲ್, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಆಸಿಫ್ ಅಬ್ದುಲ್ಲಾ, ಅಮೀರ್, ಇಬ್ರಾಹಿಂ ಕಕ್ಕೆತೋಟ, ಅಯೂಬ್ ಮಂಚಿಲ, ಅಝಾದ್ ಇಸ್ಮಾಯಿಲ್ ಇನ್ನಿತರರು ಉಪಸ್ಥಿತರಿದ್ದರು. 

ಎವರೆಸ್ಟ್ ಮುಸ್ತಫಾ ಸ್ವಾಗತಿಸಿದರು. ಸಲಾಂ ಮದನಿ ಅಳಿಕೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News