ಮಸೂದ್ ಅಝರ್ ಮೌಲಾನ ಅಲ್ಲ, ಸೈತಾನ: ಅಸಾದುದ್ದೀನ್ ಉವೈಸಿ

Update: 2019-02-24 17:59 GMT

ಮುಂಬೈ, ಫೆ.24: 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾದ ಪುಲ್ವಾಮ ದಾಳಿ ಘಟನೆಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರ ಮತ್ತು ಜೈಷೆ ಮುಹಮ್ಮದ್ ಸ್ಥಾಪಕ ಮಸೂದ್ ಅಝರ್ ವಿರುದ್ಧ ಹರಿಹಾಯ್ದಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ, ಮಸೂದ್ ಅಝರ್ ಮೌಲಾನ ಅಲ್ಲ, ಆತನೊಬ್ಬ ಸೈತಾನ ಎಂದು ಟೀಕಿಸಿದ್ದಾರೆ.

     ಅಲ್ಲದೆ ಈ ದಾಳಿ ಘಟನೆ ಮೋದಿ ಸರಕಾರದ ಅತ್ಯಂತ ದೊಡ್ಡ ವೈಫಲ್ಯಗಳಲ್ಲಿ ಒಂದಾಗಿದೆ. ಇದು ರಾಜಕೀಯ, ಆಡಳಿತಾತ್ಮಕ ಮತ್ತು ಗುಪ್ತಚರ ವೈಫಲ್ಯವಾಗಿದೆ ಎಂದಿದ್ದಾರೆ. ಅಝರ್ ಮೌಲಾನಾ ಅಲ್ಲ, ಆತನೊಬ್ಬ ಸೈತಾನ. ದೇಶದ ವಿಷಯ ಬಂದಾಗ ಭಾರತೀಯರೆಲ್ಲಾ ಒಂದಾಗುತ್ತಾರೆ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು . ಭಾರತದಲ್ಲಿರುವ ಮುಸ್ಲಿಮರ ಬಗ್ಗೆ ನಿಮಗೆ ಚಿಂತೆ ಬೇಡ. ಇಲ್ಲಿರುವ ಮುಸ್ಲಿಮರು ಜಿನ್ನಾರನ್ನು ಕಡೆಗಣಿಸಿ ಭಾರತವನ್ನು ಆಯ್ಕೆ ಮಾಡಿಕೊಂಡವರು ಎಂದು ಉವೈಸಿ ಹೇಳಿದರು.

ಮಹಾರಾಷ್ಟ್ರದಲ್ಲಿ ಆಡಳಿತ ಪಕ್ಷವಾದ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ಎರಡನ್ನೂ ಕಿತ್ತೊಗೆಯಲು ಮತದಾರರಿಗೆ ಈಗ ಅಂತಿಮ ಅವಕಾಶ ದೊರಕಿದೆ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು ಮತ್ತು ಮುಸ್ಲಿಮ್ ಸಮುದಾಯಕ್ಕೆ ಒಳಿತು ಮಾಡದ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News