ಅಜಿತ್ ದೋವಲ್‌ ರನ್ನು ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬೀಳಲಿದೆ: ರಾಜ್ ಠಾಕ್ರೆ

Update: 2019-02-25 14:35 GMT

ಹೊಸದಿಲ್ಲಿ, ಫೆ. 25: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಸಿಆರ್‌ಪಿಎಫ್ ಯೋದರು ‘ರಾಜಕೀಯ ಬಲಿಪಶು’ಗಳು ಎಂದು ಹೇಳಿರುವ ಎಂಎನ್‌ಎಸ್‌ನ ರಾಜ್ ಠಾಕ್ರೆ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ವಿಚಾರಣೆ ನಡೆಸಿದರೆ ಸತ್ಯ ಬಹಿರಂಗಗೊಳ್ಳಲಿದೆ ಎಂದಿದ್ದಾರೆ.

‘‘ಒಂದು ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಪುಲ್ವಾಮ ಭಯೋತ್ಪಾದಕ ದಾಳಿಕ ಕುರಿತಂತೆ ವಿಚಾರಣೆ ನಡೆಸಿದರೆ, ಸತ್ಯ ಹೊರಬರಲಿದ’’ ಎಂದು ಠಾಕ್ರೆ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ ಹೇಳಿದ್ದಾರೆ.

 ‘‘ಪುಲ್ವಾಮ ದಾಳಿ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಬೆಟ್ ನ್ಯಾಶನಲ್ ಪಾರ್ಕ್‌ನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಭಯೋತ್ಪಾದಕ ದಾಳಿಯ ಸುದ್ದಿ ಹರಡಿದರೂ ಅವರು ಶೂಟಿಂಗ್ ಅನ್ನು ಮುಂದುವರಿಸಿದ್ದರು.’’ ಎಂದು ಅವರು ಹೇಳಿದ್ದಾರೆ.

ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ಸಿಆರ್‌ಪಿಎಫ್‌ನ 40 ಯೋಧರು ರಾಜಕೀಯ ಬಲಿಪಶುಗಳು. ಎಲ್ಲ ಸರಕಾರದ ಆಡಳಿತದ ಅಡಿಯಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಆದರೆ, ಮೋದಿ ಸರಕಾರದ ಆಡಳಿತದ ಅಡಿಯಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತಿವೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ರಾಜ್ ಠಾಕ್ರೆ ಅವರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ವಕ್ತಾರ ಮಾಧವ್ ಭಂಡಾರಿ, ‘‘ರಾಜ್ ಠಾಕ್ರೆ ಅವರು ತನ್ನ ಜೀವನದುದ್ದಕ್ಕೂ ಮಿಮಿಕ್ರಿ ಮಾಡುತ್ತಾ ಬಂದವರು. ಈಗ ಅವರು ರಾಹುಲ್ ಗಾಂಧಿ ಪರವಾಗಿ ದೋವಲ್ ವಿರುದ್ಧ ಆರೋಪ ಮಾಡುತ್ತಿದ್ದಾರೆ.’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News