ಹೂಡೆ: ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ಉಡುಪಿ, ಫೆ.25: ತೋನ್ಸೆ ಹೂಡೆಯ ಸಾಲಿಹಾತ್ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಿಗಾಗಿ ಹತ್ತು ದಿನಗಳ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸ ಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಸಂಸ್ಥೆಯ ಖಜಾಂಚಿ ಅಬ್ದುಲ್ ಕಾದರ್ ಸಾಹೇಬ್ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಕೇವಲ ಪುಸ್ತಕದಲ್ಲಿರುವ ವಿಚಾರಗಳನ್ನು ಮಾತ್ರ ಹೇಳದೇ ಅವರ ಮುಂದಿನ ಜೀವನಕ್ಕೆ ಪೂರಕವಾಗಿರುವ ವಿಷಯಗಳನ್ನು ತಿಳಿಸಿ ತರಬೇತಿಗೊಳಿಸಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಾಗಾರದಲ್ಲಿ ಬಾಳಿಗಾ ಆಸ್ಪತ್ರೆಯ ಡಾ.ಸೌಜನ್ಯ, ಅಲ್ ಇಬಾದ ಶಾಲೆಯ ಸಂಚಾಲಕಿ ಜುವೇರಿಯಾ, ಮಣಿಪಾಲ ಕಾಲೇಜಿನ ಉಪನ್ಯಾಸಕ ಡಾ.ಅಬ್ದುಲ್ ಅಜೀಝ್, ಸಮಾಜ ಸೇವಕ ಸಈದ್ ಇಸ್ಮಾಯಿಲ್ ಮಂಗ ಳೂರು, ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ.ಅಶ್ವಿನಿ ಕುಮಾರ್, ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ಡಾ.ತಾಹಾಮತೀನ್, ಉಡುಪಿಯ ಮೌಲಾನಾ ರಶೀದ್ ಉಮ್ರಿ, ಮಲ್ಪೆಯ ಮೌಲಾನಾ ಇಮ್ರಾನುಲ್ಲಾ ಖಾನ್, ಅನುಪಮಾ ಮಾಸಿಕದ ಉಪಸಂಪಾದಕಿ ಸಬೀಹಾ ಫಾತಿಮಾ, ಉಡುಪಿಯ ಮೂಳೆತಜ್ಞ ಡಾ.ಸುರೇಶ ಶೆಣೈ, ಗೋವಾ ರಾಜ್ಯದ ಸಂಪನ್ಮೂಲ ವ್ಯಕ್ತಿ ಅತೀಕುರ್ರಹಮಾನ್, ಅನುಪಮಾ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ., ಅಲ್‌ಇಬಾದ ಶಾಲೆಯ ಕಾರ್ಯದರ್ಶಿ ಮೌಲಾನಾ ಅಬ್ದುಲ್ ಲತೀಫ್ ಮದನಿ, ಡಾ.ಮನಾಲ್, ಉಡುಪಿ ಮಿಷನ್ ಆಸ್ಪತ್ರೆಯ ವೈದ್ಯೆ ಡಾ.ದೀಪಾ ರಾವ್, ಡಾ.ಅಶ್ವತ್ ರಾವ್, ಸಮಾಜ ಸೇವಕರಾದ ಅಕ್ಬರ್ ಆಲಿ, ಶಬ್ಬೀರ್ ಮಲ್ಪೆ, ರೆಹಾನಾ, ಸುಹಾನಾ ಮಂಗಳೂರು, ಮಹರುನ್ನೀಸ ಅಜೀಝ್, ಶಾಹಿದಾ, ಶಮೀಮ್ ಮಲ್ಪೆ ಉಪನ್ಯಾಸ ನೀಡಿದರು.
ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಮಾರ್ಗದರ್ಶನದಲ್ಲಿ, ಶಿಬಿರದ ಸಂಚಾಲಕಿ ಕುಲ್ಸುಮ್ ಅಬೂಬಕರ್ ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಸಹಕರಿಸಿದರು.