ರೈಲುಗಳಲ್ಲಿ ನೀಡುವ ಆಹಾರದ ಪ್ಯಾಕೆಟ್‌ಗಳಲ್ಲಿ ಬಾರ್ ಕೋಡ್ ಅಳವಡಿಕೆ: ಪಿಯೂಷ್ ಗೋಯಲ್

Update: 2019-02-25 17:42 GMT

ಹೊಸದಿಲ್ಲಿ, ಫೆ.25: ಇನ್ನು ಮುಂದೆ ರೈಲಿನಲ್ಲಿ ಲಭ್ಯವಾಗುವ ಆಹಾರದ ಪೊಟ್ಟಣಗಳು ಪಟ್ಟಿ ಸಂಕೇತ(ಬಾರ್‌ಕೋಡ್)ಗಳನ್ನು ಹೊಂದಲಿವೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಬಾರ್‌ಕೋಡ್‌ನಲ್ಲಿ ಆಹಾರ ಸಿದ್ಧಪಡಿಸಿದ ಪಾಕಶಾಲೆಯ ಹೆಸರು ಇರುತ್ತದೆ. ಇದರಿಂದ ಪ್ರಯಾಣಿಕರ ದೂರಿನ ಬಗ್ಗೆ ಕ್ರಮ ಕೈಗೊಳ್ಳುವ ಸಮಯದ ಉಳಿತಾಯವಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ರೈಲ್ವೇಯ ‘ಇ-ದೃಷ್ಟಿ’ ಮಾಹಿತಿ ಫಲಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ರೈಲ್ವೇಯ ಎಲ್ಲಾ ರೈಲುಗಳಲ್ಲೂ ಪೂರೈಸುವ ಆಹಾರದ ಪೊಟ್ಟಣಗಳಲ್ಲಿ ಪಾಕಶಾಲೆಯ ಸಂಕೇತ ಸಂಸ್ಥೆ ಹಾಗೂ ಪ್ಯಾಕ್ ಮಾಡಿದ ಸಮಯದ ವಿವರ ಇರುತ್ತದೆ . ಇದರಿಂದ ಭಾರತೀಯ ರೈಲ್ವೇ ಕ್ಯಾಟರಿಂಗ್ ನಿಗಮದ ಯಾವ ಪಾಕಶಾಲೆಯಲ್ಲಿ , ಎಷ್ಟು ಹೊತ್ತಿಗೆ ಈ ಆಹಾರ ಸಿದ್ಧಗೊಂಡಿದೆ ಎಂಬುದು ತಕ್ಷಣ ತಿಳಿಯುತ್ತದೆ ಎಂದವರು ತಿಳಿಸಿದರು.

‘ಇ ದೃಷ್ಟಿ’ಯಲ್ಲಿ www.raildrishti.cris.org.in ವೆಬ್‌ಸೈಟ್‌ನ ಮೂಲಕ ಭಾರತೀಯ ರೈಲ್ವೇಯ ಪಾಕಶಾಲೆಗಳಲ್ಲಿ ಆಹಾರ ಸಿದ್ಧಪಡಿಸುವ ಪ್ರಕ್ರಿಯೆಯನ್ನು ದೇಶದಾದ್ಯಂತ ನೇರವಾಗಿ ವೀಕ್ಷಿಸಬಹುದಾಗಿದೆ. ಈ ಮಾಹಿತಿ ಫಲಕವನ್ನು ಸೆಂಟರ್ ಫಾರ್ ರೈಲ್ವೇ ಇನ್‌ಫಾರ್ಮೇಶನ್ ಸಿಸ್ಟಂ(ಸಿಆರ್‌ಐಎಸ್) ವಿನ್ಯಾಸಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News