×
Ad

ಭಾರತೀಯ ವಾಯು ಸೇನೆಯ ಕಾರ್ಯಾಚರಣೆ: ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಶ್ಲಾಘನೆ

Update: 2019-02-26 19:43 IST

ಮಂಗಳೂರು, ಫೆ. 26: ಇತ್ತೀಚೆಗೆ ಪುಲ್ವಾಮದಲ್ಲಿ ನಡೆದ ಯೋಧರ ಮೇಲಿನ ದಾಳಿಗೆ ಪ್ರತಿಯಾಗಿ ಭಾರತೀಯ ವಾಯು ಸೇನೆ ನಡೆಸಿದ ಸೇನಾ ಕಾರ್ಯಾಚರಣೆಯನ್ನು ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಪ್ರಶಂಸಿಸಿದೆ.

ಭಾರತದ ಯೋಧರನ್ನು ಗುರಿಯಾಗಿಸಿ ಇತ್ತೀಚೆಗೆ ಪುಲ್ವಾಮದಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿ ಭಾರತದ ಯೋಧರ ಸಾವಿಗೆ ಕಾರಣವಾದ ಘಟನೆ ತುಂಬಾ ಖೇದಕರ. ಗಡಿ ರೇಖೆಯಲ್ಲಿ ರೂಪುಗೊಳ್ಳುತ್ತಿರುವ ದುಷ್ಕರ್ಮಿ ತಂಡಗಳ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ಕಾರಣವಾಗಿ ವಾಯು ಸೇನೆ ಕಾರ್ಯಾಚರಣೆಯನ್ನು ಕೈಗೊಂಡಿರುವುದು ಶ್ಲಾಘನೀಯ, ಈ ನಿಟ್ಟಿನಲ್ಲಿ ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ  ಭಾರತದ ವಾಯು ಸೇನೆ ಮತ್ತು ಭಾರತ ಸರಕಾರವನ್ನು ಅಭಿನಂದಿಸುವುದಾಗಿ ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ಕೆ.ಅಶ್ರಫ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News