ಹಾವಂಜೆ ಗ್ರಾಪಂನಲ್ಲಿ ಜನಸ್ಪಂದನ ಸಭೆ
ಉಡುಪಿ, ಫೆ. 26: ಹಾವಂಜೆ ಗ್ರಾಪಂ ವ್ಯಾಪ್ತಿಯ ಗ್ರಾಮ ಮಟ್ಟದ ಜನಸ್ಪಂದನ ಸಭೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಸೋಮವಾರ ಹಾವಂಜೆಯಲ್ಲಿ ನಡೆಯಿತು.
ಸಭೆಯಲ್ಲಿ ಉಡುಪಿ ತಾಪಂ ಅಧ್ಯಕ್ಷೆನಳಿನಿ ಪ್ರದೀಪ್ ರಾವ್ ಆರೂರು, ಗ್ರಾಪಂ ಅಧ್ಯಕ್ಷೆ ವಸಂತಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ, ಮಾಜಿ ಅಧ್ಯಕ್ಷ ಉದಯ್ ಕೋಟ್ಯಾನ್ ಹಾವಂಜೆ, ತಹಶೀಲ್ದಾರ್ ಕಿರಣ್ ಬೋರಯ್ಯ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ. ರಾಜು, ಕಂದಾಯ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಕರಣಿಕರು ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಜನಸ್ಪಂದನ ಸಭೆಯಲ್ಲಿ 6 ಮಂದಿಗೆ ಹಕ್ಕುಪತ್ರ, 9 ಮಂದಿಗೆ ಸಂಧ್ಯಾ ಸುರಕ್ಷಾ, ಒಬ್ಬರಿಗೆ ಅಂಗವಿಕಲ ವೇತನ, ಇಬ್ಬರಿಗೆ ವಿಧವಾ ವೇತನ, ಒಬ್ಬರಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ, ಗ್ರಾಪಂನ ಶೇ. 3ರ ಅಡಿಯಲ್ಲಿ 5 ಅಂಗವಿಕಲರಿಗೆ ವೈದ್ಯಕೀಯ ನೆರವು, ಶೇ. 26ರ ನಿಧಿಯಿಂದ 6 ಮಂದಿಗೆ ವಿದ್ಯಾರ್ಥಿ ವೇತನ, 8 ಮಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿ ಪ್ರಾರಂಭಿಕ ಆದೇಶ ಪತ್ರ ಹಾಗೂ 19 ಮಂದಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡಲಾಯಿತು.
ಇದೆ ಸಂದರ್ಭದಲ್ಲಿ ಹಾವಂಜೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 10 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಆದರ್ಶ ಯುವಕ ಮಂಡಲ ಹಾವಂಜೆ ಇದರ ಗರೂಡಿ ಮನೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಶಾಸಕರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿದರು.