ಸುನಂದಾ ಪುಷ್ಕರ್ ಸಾವು ಪ್ರಕರಣ ಸೌದಿಗೆ ಪ್ರಯಾಣಿಸಲು ಶಶಿ ತರೂರ್‌ಗೆ ನ್ಯಾಯಾಲಯ ಅನುಮತಿ
Update: 2019-02-26 21:44 IST
ಹೊಸದಿಲ್ಲಿ, ಫೆ. 25: ಸುನಂದಾ ಪುಷ್ಕರ್ ಸಾವು ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಶಶಿ ತರೂರ್‌ಗೆ ಸೌದಿ ಅರೇಬಿಯಾಕ್ಕೆ ತೆರಳಲು ದಿಲ್ಲಿ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ವಿದೇಶಕ್ಕೆ ತೆರಳಲು ತರೂರ್‌ಗೆ ಅನುಮತಿ ನೀಡಲಾಗಿದೆ ಎಂದು ಸಿಬಿಐಯ ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಹೇಳಿದ್ದಾರೆ ಹಾಗೂ ನ್ಯಾಯಾಲಯದ ನಿಯಮ, ಶರತ್ತುಗಳಿಗೆ ಅವರು ಬದ್ಧವಾಗಿರಬೇಕು ಎಂದೂ ನಿರ್ದೇಶಿಸಿದ್ದಾರೆ.
ಯುಎಇ, ಕತರ್, ಬಹ್ರೈನ್‌ಗೆ ತೆರಳಲು ತರೂರ್ ಅವರಿಗೆ ಈಗಾಗಲೆ ಇನ್ನೊಂದು ನ್ಯಾಯಾಲಯ ಅನುಮತಿ ನೀಡಿದೆ ಎಂದು ಅವರು ಉಲ್ಲೇಖಿಸಿದರು. ‘‘ಯುಎಇ, ಖತರ್ ಹಾಗೂ ಬಹ್ರೈನ್‌ಗೆ ಪ್ರಯಾಣಿಸಲು ಅವರಿಗೆ ಈಗಾಗಲೇ ಅನುಮತಿ ನೀಡಲಾಗಿದೆ. ಇದಲ್ಲದೆ ಫೆಬ್ರವರಿ 28ರಿಂದ ಮಾರ್ಚ್ 4ರ ವರೆಗೆ ಸೌದಿ ಅರೇಬಿಯಾಕ್ಕೆ ತೆರಳು ಅವರಿಗೆ ಅನುಮತಿ ನೀಡಲಾಗಿದೆ’’ ಎಂದು ನ್ಯಾಯಾಲಯ ಹೇಳಿದೆ.