ಮಣಿಪಾಲ: ಕಾರು ಕಳವು
Update: 2019-02-26 21:49 IST
ಮಣಿಪಾಲ, ಫೆ.26: ಮಣಿಪಾಲದ ವಿಜಯ ರೆಸಿಡೆನ್ಸಿ ಹೊಟೇಲ್‌ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಇನೋವಾ ಕಾರು ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬಿ.ಸತೀಶ್ ಕುಮಾರ್ ಇತರರೊಂದಿಗೆ ಕೆಎ 13 ಎಂ 6350 ನಂಬರಿನ ಇನ್ನೊವಾ ಕಾರಿನಲ್ಲಿ ಬೆಂಗಳೂರಿನಿಂದ ಹೊರಟು ಫೆ.13ರಂದು ಮಣಿಪಾಲದ ಹೊಟೇಲ್‌ನಲ್ಲಿ ರೂಮ್ ಮಾಡಿ ಪಾರ್ಕಿಂಗ್ ಸ್ಥಳದಲ್ಲಿ ಕಾರನ್ನು ನಿಲ್ಲಿಸಿದ್ದರು. ನಸುಕಿನ ವೇಳೆ ನೋಡುವಾಗ ಕಾರು ಕಳವಾಗಿರುವುದು ತಿಳಿದು ಬಂದು. ಇದರ ಮೌಲ್ಯ 4.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.