ಅಂಗಡಿಗೆ ನುಗ್ಗಿ 15 ಟಿವಿ ಕಳವು
Update: 2019-02-26 21:57 IST
ಕಾರ್ಕಳ, ಫೆ. 26: ನಂದಳಿಕೆ ಬೋರ್ಡ್ ಶಾಲೆಯ ಎದುರಿನ ಅಂಗಡಿಗೆ ಫೆ.25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತು ಗಳನ್ನು ಕಳವು ಮಾಡಿದ್ದಾರೆ.
ಜ್ಯೋತಿ ಎಸ್. ಎಂಬವರ ಗುಡ್‌ವಿಲ್ ಎಂಟರ್‌ಪ್ರೈಸಸ್ ಎಂಬ ಅಂಗಡಿ ಯ ಶಟರ್‌ನ ಬೀಗ ಮುರಿದು ಒಳ ನುಗಿದ್ದ ಕಳ್ಳರು 3,00,000 ರೂ. ಮೌಲ್ಯದ ಸುಮಾರು 12 ರಿಂದ 15 ಎಲ್‌ಇಡಿ ಟಿವಿಗಳನ್ನು ಹಾಗೂ ಸುಮಾರು 1500 ರೂ. ನಗದು ಕಳವು ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.