ಜಾನುವಾರು ಕಳವು ಯತ್ನ: ಮೂವರ ಸೆರೆ
Update: 2019-02-26 22:08 IST
ಗಂಗೊಳ್ಳಿ, ಫೆ.26: ಬೀದಿ ಬದಿಯ ಜಾನುವಾರುಗಳ ಕಳವಿಗೆ ಯತ್ನಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಗಂಗೊಳ್ಳಿ ಪೊಲೀಸರು ಇಂದು ಬೆಳಗಿನ ಜಾವ ಮುಳ್ಳಿಕಟ್ಟೆ ಜಂಕ್ಷನ್ ಸಮೀಪ ನಾಯಕವಾಡಿ ಎಂಬಲ್ಲಿ ಬಂಧಿಸಿದ್ದಾರೆ.
ಮಂಗಳೂರು ತೋಡಾರು ಗ್ರಾಮದ ಅಬ್ದುಲ್ ಹನೀಫ್ (35), ಅಬುಸಾಲಿ (38), ಮೊಹಮ್ಮದ್ ಝುಬೈರ್ (33) ಬಂಧಿತ ಆರೋಪಿಗಳು. ಇವರಿಂದ ಕಾರು, ಕತ್ತಿ ಮತ್ತು ಹಗ್ಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.