ಪಾಂಬೂರು: ‘ಪರಿಚಯ ರಂಗೋತ್ಸವ’ ಸಮಾರೋಪ
ಶಿರ್ವ, ಫೆ.26: ಪರಿಚಯ ಪಾಂಬೂರು ಇದರ ವತಿಯಿಂದ ಪಾಂಬೂರು ಹೋಲಿಕ್ರಾಸ್ ಚರ್ಚ್ ವಠಾರದಲ್ಲಿ ಹಮ್ಮಿಕೊಳ್ಳಲಾದ ಏಳು ದಿನಗಳ ‘ಪರಿಚಯ ರಂಗೋತ್ಸವ’ ರಾಷ್ಟ್ರೀಯ ನಾಟಕೋತ್ಸವ ಸಪ್ತಾಹದ ಸಮಾರೋಪ ಸಮಾರಂಭ ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ಮಾತನಾಡಿ, ನಮ್ಮ ಆರೋಗ್ಯ ಉತ್ತಮವಾಗಿದ್ದರೆ ಸಮಾಜದ ಆರೋಗ್ಯವೂ ಉತ್ತಮವಾಗಿರುತ್ತದೆ. ಸಮಾಜ ಸ್ವಸ್ಥವಾಗಿದ್ದರೆ ಮಾತ್ರ ನೆಮ್ಮದಿಯ ಜೀವನ ಸಾಧ್ಯ. ನಾಟಕಗಳು ಮನರಂಜನೆಯ ಜೊತೆಗೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವಂತಾಗಿರಬೇಕು. ವೌಲ್ಯಭರಿತ ನಾಟಕಗಳಿಂದ ಯುವ ಸಮುದಾಯಕ್ಕೆ ಒಳ್ಳೆಯ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುತಾತ್ಮ ವೀರ ಯೋಧರಿಗೆ ಭಾವಪೂರ್ಣ ಶೃದ್ಧಾಂಜಲಿ ಸಮರ್ಪಿಸಲಾಯಿತು. ಫಾ.ಆಲ್ವಿನ್ ಸೆರಾವೊ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಚರ್ಚ್‌ನ ಧರ್ಮಗುರು ರೆ.ಫಾ.ಪಾವ್ಲ್ ರೇಗೊ, ರೆ.ಫಾ. ರೆನಾಲ್ಡ್ ಪಿಂಟೊ, ರೆ.ಫಾ.ಚಾರ್ಲ್ಸ್ ಮಿನೇಜಸ್, ರೆ.ಫಾ.ಲಾರೆನ್ಸ್ ಕುಟಿನ್ಹೊ, ರೆ.ಫಾ.ಹೆನ್ರಿ ಆಳ್ವ ಉಪಸ್ಥಿತರಿದ್ದರು. ಪರಿಚಯ ಸಂಸ್ಥೆಯ ಅಧ್ಯಕ್ಷ ಅನಿಲ್ ಡೇಸಾ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಕಾಶ್ ನೊರೋನ್ಹಾ ವಂದಿಸಿದರು.