‘ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ’ ಕುರಿತ ಅಭಿಯಾನ
ಮಂಗಳೂರು, ಫೆ. 26: ವುಮೆನ್ ಇಂಡಿಯಾ ಮೂವ್‌ಮೆಂಟ್ ದೇಶಾದ್ಯಂತ ಮಹಿಳಾ ದೌರ್ಜನ್ಯದ ವಿರುದ್ಧ ನಡೆಸುತ್ತಿರುವ ‘ಮಹಿಳೆಯರ ಮೇಲಿನ ಹಿಂಸೆ ನಿಲ್ಲಲಿ, ನಮ್ಮ ಸಂರಕ್ಷಣೆಗಾಗಿ ಹೋರಾಡೋಣ’ ಎಂಬ ರಾಷ್ಟವ್ಯಾಪಿ ಅಭಿಯಾನದ ಅಂಗವಾಗಿ ವಿಮ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಮಂಗಳವಾರ ದ.ಕ. ಜಿಪಂ ಸಭಾಂಗಣದಲ್ಲಿ ವಿಚಾರ ಸಂಕಿರಣ ಜರುಗಿತು.
ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ಲೀಂ ಕಾರ್ಯಕ್ರಮ ಉದ್ಘಾಟಿಸಿ ವಿಮ್ ತಳಮಟ್ಟದಲ್ಲಿ ಎಲ್ಲಾ ಭಾಷೆ, ಜಾತಿ ಧರ್ಮಗಳ ಮಹಿಳೆಯರನ್ನು ಸಂಘಟಿಸಿ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಜಾಗೃತಿ ಮೂಡಿಸುತ್ತದೆ. ಸರಕಾರಗಳು ಮಹಿಳೆಯರ ಅಭಿವೃದ್ಧಿ ವಿಷಯದಲ್ಲಿ ಕೇವಲ ಘೋಷಣೆ ಮತ್ತು ಭರವಸೆಗಳನ್ನು ಮಾತ್ರ ನೀಡುತ್ತದೆ. ಆದರೆ ವಿಮ್ ಸಂೆನಟಯು ಮಹಿಳೆಯರ ಹಕ್ಕು, ಅಭಿವೃದ್ಧಿ, ಘನತೆ ಮತ್ತು ಸ್ವಾಭಿಮಾನ ರಕ್ಷಣೆಗಾಗಿ ಹೋರಾಡುತ್ತಲೇ ಇದೆ ಎಂದರು.
ಎರ್ಮಾಳು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಜ್ಯೊತಿ ಚೇಳ್ಯಾರು ‘ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ’ದ ಬಗ್ಗೆ, ನ್ಯಾಯವಾದಿ ಆಶಾ ಪ್ರೀತಿ‘ಮಹಿಳೆಯರ ಹಕ್ಕುಗಳು ಮತ್ತು ಉಲ್ಲಂಘಣೆ’ ಬಗ್ಗೆ, ರಾಜ್ಯಾಧ್ಯಕ್ಷೆ ಝೀನತ್ ಫಿರೋಝ್ ‘ಮಹಿಳಾ ಹೋರಾಟದ ಆವಶ್ಯಕತೆ ಗಳು’ ಬಗ್ಗೆ ಮಾತನಾಡಿದರು.
ವಿಮ್ ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾತಿಮಾ ನಝ್ರತ್ ಸ್ವಾಗತಿಸಿದರು. ಜಿಲ್ಲಾ ಸಮಿತಿ ಸದಸ್ಯೆ ಸಝರಾ ಪುತ್ತೂರು ವಂದಿಸಿದರು. ರಮ್ಲತ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.