ಚಟ್ಟೆಕಲ್ಲು: ವೈದ್ಯಕೀಯ ತಪಾಸಣಾ ಶಿಬಿರ
Update: 2019-02-26 22:16 IST
ಬಂಟ್ವಾಳ, ಫೆ.26: ಸಜಿಪನಡು ಗ್ರಾಮದ ಸಜಿಪ ಚಟ್ಟೆಕಲ್ಲು ಜಲಾಲಿಯ್ಯ ಜುಮಾ ಮಸ್ಜಿದ್‌ನ ವತಿಯಿಂದ ಯೆನೆಪೊಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರವು ಚಟ್ಟೆಕಲ್ಲು ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು. ಸೈಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಆ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಯೆನೆಪೊಯ ಆಸ್ಪತ್ರೆಯ ಎಚ್‌ಒಡಿ ಸಂತೋಷ್ ಪೈ, ಚೇಳೂರು ಚರ್ಚ್‌ನ ಫಾದರ್ ಲಾರೆನ್ಸ್ ಮಸ್ಕರೇನಸ್, ಜಿಪಂ ಸದಸ್ಯ ಪ್ರಕಾಶ್ ಶೆಟ್ಟಿ ತುಂಬೆ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ತಾಪಂ ಸದಸ್ಯರಾದ ಸಂಜೀವ ಪೂಜಾರಿ, ಮಾಜಿ ತಾಪಂ ಸದಸ್ಯ ಯಶವಂತ ದೇರಾಜೆ, ಇರಾ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಟಿ.ಸುಧಾಕರ, ಸಜಿಪಮೂಡ ಗ್ರಾಪಂ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಪೂಂಜ, ಮಹಾಬಲ ಶೆಟ್ಟಿ ಬೋಳಿಯಾರು, ಕರೀಂ ಬೊಳ್ಳಾಯಿ ಮತ್ತಿತರರು ಭಾಗವಹಿಸಿದ್ದರು.