ತೊಕ್ಕೊಟ್ಟು: ಕಾಂಗ್ರೆಸ್ ವಿಜಯೋತ್ಸವ
Update: 2019-02-26 22:20 IST
ಉಳ್ಳಾಲ, ಫೆ. 26: ಕಾಶ್ಮೀರದ ಪುಲ್ವಾನಾದಲ್ಲಿ ನಡೆದ ಉಗ್ರದಾಳಿಗೆ ಪ್ರತಿಯಾಗಿ ಭಾರತೀಯ ವೀರ ಯೋಧರು ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ನಾಶಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಉಪಾಧ್ಯಕ್ಷರಾದ ಮುಸ್ತಫಾ ಮಲಾರ್, ಸುರೇಶ್ ಭಟ್ನಗರ, ಮಾಜಿ ಕೌನ್ಸಿಲರ್‌ಗಳಾದ ಉಸ್ಮಾನ್ ಕಲ್ಲಾಪು, ಮುಸ್ತಫಾ ಅಬ್ದುಲ್ಲಾ, ಮುಖಂಡರಾದ ಶ್ರೀನಿವಾಸ್ ಶೆಟ್ಟಿ ಪುಲ್ಲು, ಉಮ್ಮರ್ ಪಜೀರ್, ದಿನೇಶ್ ಕುಂಪಲ, ಬಾಝಿಲ್ ಡಿಸೋಜ, ರಫೀಕ್ ಅಂಬ್ಲಮೊಗರು, ಬಶೀರ್ ಉಂಬುದ, ಪದ್ಮನಾಭ ಗಟ್ಟಿ, ಅಬ್ದುಲ್ ರಹ್ಮಾನ್ ಕುತ್ತಾರ್ ಮತ್ತಿತರರು ಪಾಲ್ಗೊಂಡಿದ್ದರು.