ಇನ್ನಷ್ಟು ಆತ್ಮಹತ್ಯಾ ದಾಳಿಗಳನ್ನು ತಡೆಯುವುದಕ್ಕಾಗಿ ಕಾರ್ಯಾಚರಣೆ: ವಿಜಯ್ ಗೋಖಲೆ
ಹೊಸದಿಲ್ಲಿ, ಫೆ.26: ಭಾರತೀಯ ವಾಯುಪಡೆ ಇಂದು ಎಲ್‌ಓಸಿ ಸಮೀಪ ವಾಯುದಾಳಿ ನಡೆಸಿರುವುದನ್ನು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಸಮರ್ಥಿಸಿಕೊಂಡಿದ್ದಾರೆ. ಭಾರತದ ವಿವಿಧೆಡೆ ಇನ್ನೊಂದು ಆತ್ಮಹತ್ಯಾ ದಾಳಿಗಳನ್ನು ನಡೆಸಲು ಜೆಇಎಂ ಸಂಚು ನಡೆಸಿದ್ದು, ಇದಕ್ಕಾಗಿ ಆತ್ಮಹತ್ಯಾ ದಾಳಿಕೋರರಿಗೆೆ ಈ ಶಿಬಿರದಲ್ಲಿ ತರಬೇತಿಯನ್ನು ನೀಡಲಾಗುತ್ತಿತ್ತು ಎಂಬ ಬಗ್ಗೆ ವಿಶ್ವಸನೀಯ ಮಾಹಿತಿಗಳು ಲಭ್ಯವಾಗಿದ್ದವು.
ತತ್‌ಕ್ಷಣವೇ ಅಪಾಯ ಕಾದಿರುವ ಹಿನ್ನೆಲೆಯಲ್ಲಿ, ಪೂರ್ವಭಾವಿ ದಾಳಿ ಕಾರ್ಯಾಚರಣೆ ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ತನ್ನ ನೆಲವನ್ನು ಭಾರತದ ವಿರುದ್ಧದ ಭಯೋತ್ಪಾದನೆಗೆ ಬಳಸಿಕೊಳ್ಳುವುದಿಲ್ಲೆಂದು ಪಾಕಿಸ್ತಾನ ಸರಕಾರವು 2004ರ ಜನವರಿಯಂದು ಬದ್ಧತೆಯನ್ನು ಘೋಷಿಸಿತ್ತು. ಪಾಕಿಸ್ತಾನವು ಆ ಬದ್ಧತೆಯನ್ನು ಉಳಿಸಿಕೊಳ್ಳಬೇಕು ಹಾಗೂ ಜೆಇಎಂ ಮತ್ತಿತರ ಉಗ್ರರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಭಾರತ ನಿರೀಕ್ಷಿಸುತ್ತದೆಯೆಂದು ವಿಜಯ್ ಗೋಖಲೆ ಹೇಳಿದ್ದಾರೆ.
ಸಾವಿನ ನಿಖರ ಸಂಖ್ಯೆ ಎಷ್ಟು?
ಎಲ್‌ಓಸಿ ಸಮೀಪದ ಬಾಲಕೋಟ್‌ನಲ್ಲಿ ಜೈಶೆ ಮುಹಮ್ಮದ್ ಉಗ್ರರ ನೆಲೆಗಳ ಮೇಲೆ ಇಂದು ನಡೆದ ಭಾರತೀಯ ವಾಯುಪಡೆಯ ದಾಳಿಯಲ್ಲಿ ಕನಿಷ್ಠ 200 ಮಂದಿ ಸಾವನ್ನಪ್ಪಿದ್ದಾರೆಂದು ಭಾರತ ಸರಕಾರ ಘೋಷಿಸಿದ್ದರೆ, ಪಾಕಿಸ್ತಾನವು ಈ ದಾಳಿಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ಹೇಳಿಕೊಂಡಿದೆ.
‘‘ಭಾರತೀಯ ವಾಯುಪಡೆಯು ಅಝಾದ್ ಜಮ್ಮುಕಾಶ್ಮೀರ (ಪಿಓಕೆ)ದ ಮುಝಫರಾಬಾದ್ ಸೆಕ್ಟರ್‌ನಿಂದ ಅತಿಕ್ರಮ ಪ್ರವೇಶ ಮಾಡಿದ್ದು, ಪಾಕ್ ವಾಯುಸೀಮೆಯ ಮೂರ್ನಾಲ್ಕು ಮೈಲಿಯೊಳಗೆ ಮಾತ್ರ ಒಳಪ್ರವೇಶಿಸಲು ಅವುಗಳಿಗೆ ಸಾಧ್ಯವಾಗಿದೆ. ೆ. ‘‘ ಭಾರತೀಯ ವಾಯುಪಡೆಯ ವಿಮಾನಗಳು ಮುಝಫರ್‌ಬಾದ್ ವಲಯದ ಗಜಿನ ಇಂಯತ್ರಣರೇಖೆ.ಯೊೆ ಅತಿಕ್ರಮದಿಂದ ಪ್ರವೇಶಿಸಿವೆ. ಪಾಕಿಸ್ತಾನ ವಾಯುಪಡೆಯಿಂ ಸಕಾಲಿಕ ಹಾಗೂ ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಎದುರಿಸಿದ ಭಾರತೀಯ ವಾಯುಪಡೆಯ ವಿಮಾನಗಳು ಧಾವಂತದಿಂದಾಗಿ ಪೇಲೋಡ್‌ಗಳನ್ನು ಎಸೆದಿದ್ದು, ಅವು ಪಠಾಣ್‌ಕೋಟ್ ಬಳಿ ಬಿದ್ದಿವೆ. ಯಾವುದೇ ಸಾವುನೋವು ಸಂಭವಿಸಿಲ್ಲ ಎಂಎದು ಮೇಜರ್ ಜನರಲ್ ಅಸೀಫ್ ಗಫೂರ್ ತಿಳಿಸಿದ್ದಾರೆ. ಲೇಸರ್‌ನಿರ್ದೇಶಿತಬಾಂಬ್‌ಗಳ ಬಳಕೆ
ಹೊಸದಿಲ್ಲಿ, ಫೆ.26:ಬಾಲಕೋಟ್‌ನಲ್ಲಿ ಜೈಶೆ ಉಗ್ರರ ಶಿಬಿರಗಳ ಮೇಲೆ ದಾಳಿಗೆ, ಭಾರತವು ಬಳಸಿದ ಲೇಸರ್ ನಿರ್ದೇಶಿತ ಬಾಂಬ್‌ಗಳು ಇಸ್ರೇಲ್ ತಂತ್ರಜ್ಞಾನದಿಂದ ನಿರ್ಮಿತವಾದುದಾಗಿವೆ. ಕಾರ್ಗಿಲ್ ಯುದ್ಧದಲ್ಲಿ ಅವುಗಳನ್ನು ಮೊದಲ ಬಾರಿಗೆ ಬಳಸಲಾಗಿದೆ. ಬಾಲಕೋಟ್‌ನಲ್ಲಿರುವ ಜೈಶೆ ಉಗ್ರರ ಶಿಬಿರವು 6ರಿಂದ7 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿತ ಹರಡಿಕೊಂಡಿತ್ತು. ಪಾಕಿಸ್ತಾನದಲ್ಲಿರುವ ಅತಿ ದೊಡ್ಡ ಜೆಇಎಂ ಶಿಬಿರ ಇದೆಂದು ನಂಬಲಾಗಿದೆ.