ಪ್ರತ್ಯೇಕತಾವಾದಿ ಯಾಸಿನ್ ಮಲಿಕ್ ನಿವಾಸದಲ್ಲಿ ಎನ್‌ಐಎ ಶೋಧನೆ

Update: 2019-02-26 17:28 GMT

ಶ್ರೀನಗರ,ಫೆ.26: ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯು ಮಂಗಳವಾರ ಶ್ರೀನಗರದ ಮೈಸುಮಾ ಪ್ರದೇಶದಲ್ಲಿರುವ ಜೆಕೆಎಲ್‌ಎಫ್ ಅಧ್ಯಕ್ಷ ಯಾಸಿನ್ ಮಲಿಕ್ ನಿವಾಸದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸಿತು.

ಎನ್‌ಐಎ ಮತ್ತು ಪೊಲೀಸ್ ತಂಡಗಳು ಶೋಧ ಕಾರ್ಯಾಚರಣೆ ಆರಂಭಿಸಿದ್ದು,ಯಾಸಿನ್ ನಿವಾಸವಿರುವ ಪ್ರದೇಶಕ್ಕೆ ಎಲ್ಲ ಕಡೆಗಳಿಂದಲೂ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು,ಮಾಧ್ಯಮ ಪ್ರತಿನಿಧಿಗಳಿಗೂ ಆ ಪ್ರದೇಶದಲ್ಲಿ ಚಲನವಲನವನ್ನು ನಿಷೇಧಿಸಲಾಗಿತ್ತು ಎಂದು ಜೆಕೆಎಲ್‌ಎಫ್ ವಕ್ತಾರರು ತಿಳಿಸಿದರು.

ಫೆ.22ರಂದು ಮಲಿಕ್ ಬಂಧನವಾಗಿದ್ದು,ಕೋಠಿಬಾಗ್ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ. ಬಂಧನಕ್ಕೆ ಯಾವುದೇ ಕಾರಣವನ್ನು ಪೊಲೀಸರು ನೀಡಿರಲಿಲ್ಲ.

ಮಲಿಕ್ ಮತ್ತು ಜಮಾಅತೆ ಇಸ್ಲಾಮಿ ಗುಂಪಿನ ಹಲವಾರು ಕಾರ್ಯಕರ್ತರ ಬಂಧನವನ್ನು ವಿರೋಧಿಸಿ ರವಿವಾರ ಜಂಟಿ ಪ್ರತಿರೋಧ ನಾಯಕತ್ವವು ಕಾಶ್ಮೀರ್ ಕಣಿವೆಯಲ್ಲಿ ಬಂದ್ ಆಚರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News