ಇಡೀ ರಾತ್ರಿ ಉಗ್ರರ ಮೇಲಿನ ದಾಳಿಯ ಮೇಲೆ ಕಣ್ಣಿಟ್ಟಿದ್ದ ಪ್ರಧಾನಿ ಮೋದಿ

Update: 2019-02-26 17:36 GMT

ಹೊಸದಿಲ್ಲಿ, ಫೆ.26: ಪಾಕಿಸ್ತಾನದಲ್ಲಿರುವ ಜೈಶೆ ಮುಹಮ್ಮದ್ ಉಗ್ರ ತಾಣದ ಮೇಲೆ ಭಾರತೀಯ ವಾಯುಪಡೆ ನಡೆಸಿದ ಕಾರ್ಯಾಚರಣೆಯುದ್ದಕ್ಕೂ ಪ್ರಧಾನಿ ಮೋದಿ ಕಣ್ಣಿಟ್ಟಿದ್ದರು. ಎಲ್ಲಾ ಪೈಲಟ್ ಗಳು ಹಿಂದಿರುಗಿದ ನಂತರವಷ್ಟೇ ವಿಶ್ರಾಂತಿ ಪಡೆದರು ಎಂದು ಸರಕಾರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಶುಭಾಶಯ ತಿಳಿಸಿ ಮುಂಜಾನೆ 4:30ರ ಸುಮಾರಿಗೆ ಪ್ರಧಾನಿ ತಮ್ಮ ದೈನಂದಿನ ಕಾರ್ಯಕ್ಕೆ ಮರಳಿದರು. ಬೆಳಗ್ಗೆ 10 ಗಂಟೆಗೆ ಭದ್ರತೆಗೆ ಸಂಬಂಧಿಸಿ ಕ್ಯಾಬಿನೆಟ್ ಸಮಿತಿಯೊಂದಿಗೆ ಮಾತುಕತೆ ನಡೆಸಿದರು ಎಂದು ವರದಿಯಾಗಿದೆ.

“ಪ್ರಧಾನಿಯವರು ರಾತ್ರಿಯಿಡೀ ನಿದ್ದೆ ಮಾಡಿಲ್ಲ ಮತ್ತು ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದರು” ಎಂದು ಮೂಲವೊಂದು ತಿಳಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮೋದಿ ಮನೆಯಿಂದ ಅಥವಾ ಬೇರೆ ಯಾವುದೋ ಕಡೆಯಿಂದ ಈ ಕಾರ್ಯಾಚರಣೆಯನ್ನು ಕಂಟ್ರೋಲ್ ರೂಮ್ ಮೂಲಕ ಪರಿಶೀಲಿಸುತ್ತಿದ್ದರು ಎನ್ನುವುದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News