×
Ad

‘ಯೂಜಿನಿಕೋನ್ -2019’ ರಾಷ್ಟ್ರೀಯ ಸಮ್ಮೇಳನ ಸಮಾರೋಪ

Update: 2019-02-27 19:57 IST

ಉಡುಪಿ, ಫೆ.27: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ವತಿಯಿಂದ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಆಯುರ್ವೇದದ ವಿಶೇಷ ಚಿಕಿತ್ಸಾ ಸೂತ್ರಗಳಾದ ರಸಾಯನ ಹಾಗೂ ವಾಜೀಕರಣಗಳ ಕುರಿತ ‘ಯೂಜಿಕೊನ್-2019’ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭ ಇತ್ತೀಚೆಗೆ ಜರಗಿತು.

ಅಧ್ಯಕ್ಷತೆಯನ್ನು ಸ್ನಾತಕೋತ್ತರ ಮತ್ತು ಪಿಎಚ್‌ಡಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ನಿರಂಜನ್ ರಾವ್ ವಹಿಸಿದ್ದರು. ಆಸ್ಪತ್ರೆಯ ಅಧೀಕ್ಷಕಿ ಡಾ. ಮಮತಾ ಕೆ.ವಿ., ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ವೀರ ಕುಮಾರ ಕೆ. ಉಪಸ್ಥಿತರಿದ್ದರು.

ಕಾಯಚಿಕಿತ್ಸಾ ಮತ್ತು ಮಾನಸರೋಗ ವಿಭಾಗ ಮುಖ್ಯಸ್ಥೆ ಡಾ.ಶ್ರೀಲತಾ ಕಾಮತ್ ಟಿ. ವರದಿಯನ್ನು ವಾಚಿಸಿದರು. ಉತ್ತಮ ಪ್ರಬಂಧ ಪ್ರಸ್ತುತಿಗಾಗಿ ಡಾ.ಪುನೀತ್, ಡಾ.ಆರ್ಯಮೊಲ್ ಎ.ಡಿ., ಡಾ.ಅಶ್ವತಿ ಪಿ., ಡಾ.ಗೀತಾ ನಾಯಕ್, ಡಾ.ವಿದ್ಯಾಶ್ರೀ, ಡಾ.ರೋಜಾ, ಡಾ.ಆಶ್ವಿತಾ ಎಂ.ಎಸ್. ಮತ್ತು ಉತ್ತಮ ಭಿತ್ತಿ ಪತ್ರ ಪ್ರಸ್ತುತಿಗಾಗಿ ಡಾ.ಶಿರಿನ್ ಶ್ರೀನಿವಾಸ, ಡಾ.ಆರತಿ ಮೆನ್ ಅವರಿಗೆ ಪ್ರಶಸ್ತಿ ವಿತರಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನಾಧಿ ಕಾರಿ ಡಾ.ಸುಚೇತಾ ಕುಮಾರಿ ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪ್ರಸನ್ನ ಎನ್.ಮೊಗಸಾಲೆ ವಂದಿಸಿದರು. ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂದೇ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News