×
Ad

ಉಡುಪಿ: ತೆರಿಗೆ ಪಾವತಿಸಲು ಸೂಚನೆ

Update: 2019-02-27 20:18 IST

ಉಡುಪಿ, ಫೆ.27: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕಟ್ಟಡಗಳ ಮತ್ತು ಕೃಷಿಯೇತರ ನಿವೇಶನಗಳ ಮಾಲಕರು/ ಅನುಬೋಗದಾ ರರು ತಮ್ಮ ಆಸ್ತಿಯ ಬಾಕಿ ಮತ್ತು 2018-19ನೇ ಸಾಲಿನ ತೆರಿಗೆಯನ್ನು ಮಾ. 31ರೊಳಗೆ ಪಾವತಿಸಬೇಕಾಗಿದೆ. ತಪ್ಪಿದ್ದಲ್ಲಿ ಕರ್ನಾಟಕ ಪುರಸಬಾ ಕಾಯ್ದೆ 1964ರ ಪ್ರಕರಣ 142ರಂತೆ ವಸೂಲಾತಿಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಆದ್ದರಿಂದ ಎಲ್ಲಾ ತೆರಿಗೆದಾರರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿಸಿ, ಕಾನೂನು ಕ್ರಮಕ್ಕೆ ಅವಕಾಶ ನೀಡದೇ ನಗರ ಸಭೆಯೊಂದಿಗೆ ಸಹಕರಿಸುವಂತೆ ಉಡುಪಿ ನಗರ ಸಭಾ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News