ಉಡುಪಿ: ಬಾಲಕನ ಮಾಹಿತಿಗೆ ಕೋರಿಕೆ
Update: 2019-02-27 20:22 IST
ಉಡುಪಿ, ಫೆ.27: ಮಧ್ಯಪ್ರದೇಶ ಮೂಲದ ದುಂಗಾರಿಯ ನಿವಾಸಿ ರತಿಲಾಲ್ (17) ಎಂಬ ಬಾಲಕ 2015ರಲ್ಲಿ ಪಡುಬಿದ್ರೆ ಪರಿಸರ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಪ್ರಸ್ತುತ ಕುಂದಾಪುರದ ನಮ್ಮಭೂಮಿ ಸಂಸ್ಥೆಯಲ್ಲಿ ತಾತ್ಕಾಲಿಕ ಪುನರ್ವಸತಿ ವ್ಯವಸ್ಥೆಯಲ್ಲಿದ್ದಾನೆ.
ಈ ಬಾಲಕನ ಬಗ್ಗೆ ಮಾಹಿತಿ ಇದ್ದವರು ಮಣಿಪಾಲದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯನ್ನು ಹಾಗೂ ನಿಟ್ಟೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಳ ಪ್ರಕಟಣೆ ತಿಳಿಸಿದೆ.