ಭಾರತದ ವಾಯುಸೇನೆ ದಾಳಿಗೆ ಕಾಂಗ್ರೆಸ್ ಸ್ವಾಗತ
Update: 2019-02-27 21:28 IST
ಉಡುಪಿ, ಫೆ.27: ಪುಲ್ವಾಮದಲ್ಲಿ ಉಗ್ರರು ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಿ 44 ಸೈನಿಕರನ್ನು ಕೊಂದ ಪೈಶಾಚಿಕ ಕೃತ್ಯಕ್ಕೆ ಭಾರತೀಯ ಸೇನೆ ಸರಿಯಾಗಿಯೇ ಪ್ರತೀಕಾರ ತೀರಿಸಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಭಾರತ ದೇಶಕ್ಕೆ ಪಾಕಿಸಾತಿನ ಎಂದೂ ಸರಿಸಾಟಿಯಲ್ಲ. ಅದೊಂದು ಹತಾಶ ಹಾಗೂ ಉಗ್ರಗಾಮಿಗಳನ್ನು ಪೋಷಿಸುವ ದೇಶವಾಗಿದೆ. ಆದ್ದರಿಂದ ಅಂತಹ ದೇಶದ ಮೇಲೆ ದಾಳಿ ಮಾಡುವಾಗ ಸರ್ವ ರೀತಿಯ ಸಿದ್ದತೆಯೂ ಅಗತ್ಯ. ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸುವವರೆಗೆ ಎಲ್ಲಾ ದೇಶಗಳು ಆರ್ಥಿಕ ದಿಗ್ಬಂಧನ ಹೇರುವಲ್ಲಿ ಭಾರತದೊಂದಿಗೆ ಕೈಜೋಡಿಸಬೇಕು ಎಂದು ಕಾಂಗ್ರೆಸ್ ಪ್ರಕಟಣೆಯಲ್ಲಿ ತಿಳಿಸಿದೆ.