×
Ad

ಮಾ.3ರಂದು ಮಾಜಿ ಪ್ರಧಾನಿ ದೇವೇಗೌಡ ಮಂಗಳೂರಿಗೆ

Update: 2019-02-27 22:11 IST

ಮಂಗಳೂರು, ಫೆ.27: ಮಹಾತ್ಮ ಗಾಂಧಿ ಶಾಂತಿ-ಸೌಹಾರ್ದ ವೇದಿಕೆಯಿಂದ ದಿ.ಕುರ್ನಾಡು (ಪುಲ್ಲು) ರಾಮಯ್ಯ ನಾಯ್ಕ ಮತ್ತು ದಿ.ಮಹೀಮ್ ಹೆಗ್ಡೆ ಅವರ ‘ನೆನಪು’ ಕಾರ್ಯಕ್ರಮ ಮಾ.3ರಂದು ನಗರದ ಪುರಭವನದಲ್ಲಿ ನಡೆಯಲಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಸ್ಥಾಪಕ ಅಧ್ಯಕ್ಷ ರವಿಶಂಕರ್ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಾಂತಿ, ಸೌಹಾರ್ದ, ಸಹಬಾಳ್ವೆಯ ತತ್ವದಡಿ 2006ರಲ್ಲಿ ವೇದಿಕೆ ಆರಂಭಿಸಲಾಗಿದ್ದು ದಿ.ಎಂ.ಪಿ.ಪ್ರಕಾಶ್, ದಿ.ಕೆ.ಎನ್.ರಾಜಪ್ಪ, ದಿ.ಡಾ.ಎಜಾಸುದ್ದೀನ್ ಹಾಗೂ ರೆ.ಫಾ.ಫಾಸ್ಡಿನ್ ಲೋಬೋ ಮಹಾಪೋಷಕರಾಗಿದ್ದರು. ಈ ಸಂಘಟನೆಯಲ್ಲಿ ರಾಮಯ್ಯ ನಾಯ್ಕಿ ಬಳಿಕ ವಸಂತ ಬಂಗೇರ ಅಧ್ಯಕ್ಷರಾಗಿದ್ದರು. ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಅವರನ್ನು ನೆನಪಿಸುವುದು ಕರ್ತವ್ಯ ಎಂದರು.

ಕಾರ್ಯಕ್ರಮದಲ್ಲಿ ರಾಮಯ್ಯ ನಾಯ್ಕ ಒಡನಾಡಿಯಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಆಹ್ವಾನಿಸಲಾಗಿದೆ. ವೇದಿಕೆಯಲ್ಲಿ ಇರುವ ಎಲ್ಲರೂ ಒಂದೊಂದು ಪಕ್ಷದಲ್ಲಿದ್ದು ಹೆಚ್ಚಿನವರು ಕಾಂಗ್ರೆಸ್ ಪಕ್ಷದಲ್ಲಿದ್ದರೂ ವೇದಿಕೆಗೆ ರಾಜಕೀಯ ತಂದಿಲ್ಲ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಫಾರೂಕ್ ಉಳ್ಳಾಲ್, ಸುರೇಶ್ ಶೆಟ್ಟಿ, ದಿನೇಶ್ ಕುಂಪಲ, ಶ್ರೀನಿವಾಸ ಶೆಟ್ಟಿ ಪುಲ್ಲು, ನಝೀರ್ ಉಳ್ಳಾಲ್, ಯೋಗೀಶ್ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News