ಬಂಟ್ವಾಳ: ಮತದಾನದ ಕುರಿತು ಅರಿವು ಮೂಡಿಸುವ ಜಾಥಾ
ಬಂಟ್ವಾಳ, ಫೆ. 27: ಭಾರತ ಚುನಾವಣಾ ಆಯೋಗ, ಬಂಟ್ವಾಳ ಪುರಸಭೆ, ದ.ಕ.ಜಿಲ್ಲಾ ಸ್ವೀಪ್ ಸಮಿತಿ, ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಜಾಥಾವು ಬುಧವಾರ ಮೊಡಂಕಾಪು ಕಾಲೇಜಿನಿಂದ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ನಡೆಯಿತು.
ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮಾಹಿತಿ ನೀಡಿ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡದೇ ಇರುವವರಿಗೆ ಮತದಾರರ ಪಟ್ಟಿಯಲ್ಲಿ ಮಿಂಚಿನ ನೋಂದಣಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಬೇಕಾದಂತಹ ದಾಖಲೆಗಳನ್ನು ಒದಗಿಸಿ ತಮ್ಮ ಹೆಸರನ್ನು ನೋಂದಣಿ ಮಾಡುವಂತೆ ಹಾಗೂ ಪ್ರಜಾಪ್ರಭುತ್ವಕ್ಕಾಗಿ ಮತದಾನ ಮಾಡುವಂತೆ ಮಾಹಿತಿ ನೀಡಿದರು. ಬಳಿಕ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಸಂತಿ ಗಂಗಾಧರ್, ಸುಪ್ರಿಯಾ ಎಸಿ, ಸಂಚಾರಿ ಪೊಲೀಸ್ ಠಾಣೆಯ ಎಎಸ್ಸೈ ಬಾಲಕೃಷ್ಣ, ಪುರಸಭೆಯ ಅಧಿಕಾರಿಗಳು, ಕಾಲೇಜಿನ ಶಿಕ್ಷಕ, ವಿದ್ಯಾರ್ಥಿ ವರ್ಗ ಸಹಿತ ಹಲವರು ಪಾಲ್ಗೊಂಡು ಮತದಾನದ ಮಹತ್ವ ಸಾರುವ ಜಾಗೃತಿಯ ಪ್ರತಿಜ್ಞೆಯನ್ನು ಕೈಗೊಂಡರು.