ಮಹಾರಾಷ್ಟ್ರದ ಬರ ಪೀಡಿತ ಪ್ರದೇಶದ ರೈತರಿಗೆ 1,507 ಕೋ. ರೂ. ನೆರವು

Update: 2019-02-27 17:26 GMT

ಮುಂಬೈ, ಫೆ. 27: ಬರ ಸಂತ್ರಸ್ತ 42 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 1,507 ಕೋಟಿ ರೂಪಾಯಿ ನೆರವನ್ನು ಜಮಾ ಮಾಡಲಾಗಿದೆ ಎಂದು ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್ ಮುಂಗಂಟಿವಾರ್ ಬುಧವಾರ ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ ಒಟ್ಟು 2,909 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಧಾನ ಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ ಮುಂಗಂಟಿವಾರ್, ಬರದಿಂದಾಗಿ 151 ತಾಲೂಕುಗಳಲ್ಲಿ 85.76 ಲಕ್ಷ ಹೆಕ್ಟೇರ್ ಭೂಮಿ ಹೊಂದಿರುವ 82,27,166 ರೈತರು ತೊಂದರೆಗೆ ಒಳಗಾಗಿದ್ದಾರೆ ಎಂದರು.

 ಈ ರೈತರಿಗೆ ಹಣಕಾಸಿನ ನರೆವನ್ನು ಎರಡು ಹೆಕ್ಟೇರ್‌ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್ ಶುಷ್ಕ ಭೂಮಿಗೆ ರೂ. 6,800, ನೀರಾವರಿ ಭೂಮಿಗೆ ರೂ. 13,500 ಹಾಗೂ ಬಹುಬೆಳೆಯ ಭೂಮಿಗೆ 18,000 ರೂ. ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.

 ಫೆಬ್ರವರಿ 23ರ ವರೆಗೆ 42 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ 1,507 ಕೋಟಿ ರೂಪಾಯಿ ಜಮಾ ಮಾಡಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News