ಭಟ್ಕಳ: ಇವಿಎಮ್ , ವಿವಿಪ್ಯಾಟ್ ಬಳಕೆಯ ಬಗ್ಗೆ ಮಾಹಿತಿ
Update: 2019-02-27 22:58 IST
ಭಟ್ಕಳ, ಫೆ. 27: ಲೋಕಸಭಾ ಚುನಾವಣೆಯ ಅಂಗವಾಗಿ ಸೋಮವಾರ ಬೆಳಗ್ಗೆ ತಾಲೂಕಿನ ಪುರಸಭಾ ಕಚೇರಿಯ ಆವರಣದಲ್ಲಿ ಇವಿಎಮ್ ಮತ್ತು ವಿವಿಪ್ಯಾಟ್ ಬಳಕೆಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಭಟ್ಕಳ ಪುರಸಭಾ ಅಧ್ಯಕ್ಷ ಸಾದೀಕ್ ಮಟ್ಟಾ, ಮುಖ್ಯಾಧಿಕಾರಿ ದೇವರಾಜ್, ಉಪಾಧ್ಯಕ್ಷ ಕೆ.ಎಮ್. ಅಶ್ಫಾಕ್, ಅಭಿಯಂತರ ವೆಂಕಟೇಶ ನಾವುಡಾ, ಚುನಾವಣಾ ಅಧಿಕಾರಿ ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.