ಮಂಗಳೂರು: ಮಹಿಳೆಯರಿಗೆ ಉಚಿತ ಮೊಬೈಲ್ ಟೆಕ್ನಿಶಿಯನ್ ತರಬೇತಿ
ಮಂಗಳೂರು, ಫೆ. 28: ಆಸರೆ ವಿಮೆನ್ಸ್ ಫೌಂಡೇಶನ್ ವತಿಯಿಂದ ಮಹಿಳೆಯರಿಗೆ ಉಚಿತ ಮೊಬೈಲ್ ಟೆಕ್ನಿಶಿಯನ್ ಕೋರ್ಸು ತರಬೇತಿ ನಡೆಯಲಿದ್ದು, ಆಸಕ್ತ ಮಹಿಳೆಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತರಬೇತಿಯ ಕಾಲಾವಧಿ 4 ತಿಂಗಳು. ಕನಿಷ್ಟ ವಿದ್ಯಾರ್ಹತೆ ಎಸೆಸೆಲ್ಸಿ ಪಾಸ್/ಫೈಲ್. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 10. ಸಂಸ್ಥೆಯ ವತಿಯಿಂದ ಮಹಿಳೆಯರಿಗೆ ಸ್ವಉದ್ಯೋಗಕ್ಕಾಗಿ ಫಿನಾಯಿಲ್, ಸೋಪ್ ವಾಟರ್, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಮಸಾಲೆ ಹುಡಿ ತಯಾರಿ ಮೊದಲಾದ ತರಬೇತಿಗಳನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಹಲವು ಮಂದಿ ಸ್ವಉದ್ಯೋಗ ಕೈಗೊಂಡಿರುತ್ತಾರೆ.
ಇದೀಗ ಮಹಿಳಾ ಸ್ವಉದ್ಯೋಗಕ್ಕಾಗಿ ಮೊಬೈಲ್ ಟೆಕ್ನಿಶಿಯನ್ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ಮಹಿಳೆಯರು ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಸದಸ್ಯೆ ಝೊಹರಾ ಬಾನು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ವಿಶ್ವಾಸ್‍ಕ್ರೌನ್, ಕಂಕನಾಡಿ, ಮಂಗಳೂರು-2. ದೂರವಾಣಿ-0824-4267883, 9343922606 ಸಂಪರ್ಕಿಸಬಹುದು.