×
Ad

ಯುದ್ಧದ ಭೀತಿ: ಉಡುಪಿ ಜಿಲ್ಲೆಯಾದ್ಯಂತ ಕಟ್ಟೆಚ್ಚರ

Update: 2019-02-28 20:51 IST

ಉಡುಪಿ, ಫೆ. 28: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಬಳಿಕ ಸರಣಿಯಂತೆ ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ದೇಶದ ಗಡಿ ಭಾಗದಲ್ಲಿ ಯುದ್ಧ ಭೀತಿ ಆವರಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತದಂತೆ ಉಡುಪಿ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳಿಂದ ಬಂದಿರುವ ಸೂಚನೆಗಳಂತೆ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಪ್ರಮುಖ ದೇವಸ್ಥಾನ, ಬ್ಯಾಂಕ್, ಕೋರ್ಟ್ ಮುಂತಾದ ಕಡೆಗಳಲ್ಲಿ ಪೊಲೀಸರ ಕಣ್ಗಾವಲನ್ನು ಬಿಗಿಗೊಳಿಸಲಾಗಿದೆ. ಪೊಲೀಸ್ ಪೆಟ್ರೋಲಿಂಗ್‌ನ್ನು ಹೆಚ್ಚಿಸಲಾಗಿದೆ. ಬಸ್‌ನಿಲ್ದಾಣ, ರೈಲ್ಪೆ ನಿಲ್ದಾಣ, ಬಂದರುಗಳು ಅಲ್ಲದೇ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣು ಇಡುವಂತೆ ಸೂಚನೆ ನೀಡಲಾಗಿದೆ. ಗುಪ್ತಚರ ಇಲಾಖೆಗಳ ಮಾಹಿತಿ ಯಂತೆ ಹೊರಗಿನಿಂದ ಬರುವ ಹಾಗೂ ಅಪರಿಚಿತರ ಚಲನವಲನಗಳನ್ನು ಗಮನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳಿಂದ ಬಂದಿರುವ ಸೂಚನೆಗಳಂತೆ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇರುವ ಪ್ರಮುಖ ದೇವಸ್ಥಾನ, ಬ್ಯಾಂಕ್, ಕೋರ್ಟ್ ಮುಂತಾದ ಕಡೆಗಳಲ್ಲಿ ಪೊಲೀಸರ ಕಣ್ಗಾವಲನ್ನು ಬಿಗಿಗೊಳಿಸಲಾ ಗಿದೆ. ಪೊಲೀಸ್ ಪೆಟ್ರೋಲಿಂಗ್‌ನ್ನು ಹೆಚ್ಚಿಸಲಾಗಿದೆ. ಬಸ್‌ನಿಲ್ದಾಣ, ರೈಲ್ಪೆ ನಿಲ್ದಾಣ, ಬಂದರುಗಳು ಅಲ್ಲದೇ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನ ಕಣ್ಣು ಇಡುವಂತೆ ಸೂಚನೆ ನೀಡಲಾಗಿದೆ. ಗುಪ್ತಚರ ಇಲಾಖೆಗಳ ಮಾಹಿತಿ ಯಂತೆ ಹೊರಗಿನಿಂದ ಬರುವ ಹಾಗೂ ಅಪರಿಚಿತರ ಚಲನವಲನಗಳನ್ನು ಗಮನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ವಾಮ ದಾಳಿಯ ಬಳಿಕ ಮಲ್ಪೆಯಲ್ಲಿರುವ ಕರಾವಳಿ ಕಾವಲು ಪಡೆ ಅಧಿಕಾರಿ ಅಲರ್ಟ್ ಆಗಿದ್ದು, ಪ್ರತಿದಿನ ಸಮುದ್ರದಲ್ಲಿ ನಡೆಸುವ ಗಸ್ತನ್ನು ಹೆಚ್ಚಿಸಲಾ ಗಿದೆ. ಸಾಗರ ರಕ್ಷಕ ದಳದ ಸದಸ್ಯರಿಗೆ ಅಲರ್ಟ್ ಆಗಿರುವಂತೆ ಸೂಚನೆಗಳನ್ನು ಸಹ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯ ಸಮುದ್ರ ತೀರ ಪ್ರದೇಶಗಳಲ್ಲೂ ಅಗತ್ಯ ಮನ್ನೆಚ್ಛರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೀನುಗಾರಿಕೆ ವೇಳೆ ಸಮುದ್ರದಲ್ಲಿ ಅನುಮಾನಾಸ್ಪದ ಬೋಟ್, ಹಡಗು ಅಥವಾ ಯಾವುದೇ ವಸ್ತುಗಳು ಕಂಡರೂ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರರಿಗೆ ಅಧಿಕಾರಿಗಳು ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News